Advertisement
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ ಆಯೋಜಿಸಿದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ತುಳು ಜಾನಪದ ಸ್ಪರ್ಧೋತ್ಸವ ಫಿಲೋ ಪಂಥೊ -2017 ಇದರ ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಜಾನಪದ ಕ್ರೀಡೆಗಳು ನಶಿಸಿ ಹೋಗುವ ಹಂತಕ್ಕೆ ಬಂದಿದೆ ಎಂದರು.
ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ ಮಾತನಾಡಿ, ಹಿಂದಿನ ಕಾಲದಲ್ಲಿ ಬೇಸಾಯದ ಕೆಲಸ ಮುಗಿಸಿ, ದಣಿವಾರಿಸಿಕೊಳ್ಳುವ ಮತ್ತು ಉತ್ಸಾಹವನ್ನು ಮರು ಪಡೆಯುವ ಉದ್ದೇಶದಿಂದ ಕಂಬಳಗಳನ್ನು ನಡೆಸಲಾಗುತ್ತಿತ್ತು. ಇದೀಗ ಗದ್ದೆ ಬೇಸಾಯ ನಿಂತಿದೆ. ಜನರು ಅಡಿಕೆ, ರಬ್ಬರ್, ಗೇರು ಕೃಷಿಯ ಕಡೆಗೆ ಆಕರ್ಷಿತರಾಗಿದ್ದಾರೆ. ಇಂತಹ ಬದಲಾದ ಕಸುಬಿನಿಂದಾಗಿ ತುಳು ನಾಡಿನ ಸಂಸ್ಕೃತಿಯೇ ನಶಿಸಿ ಹೋಗುವ ಹಂತಕ್ಕೆ ಬಂದಿದೆ ಎಂದು ಹೇಳಿದರು.
Related Articles
ಗೌರವ ಅತಿಥಿಯಾಗಿದ್ದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ನಮ್ಮ ನಡೆ, ನುಡಿ ಮತ್ತು ಆಚಾರ ಯಾವುದೇ ಒಂದು ಧರ್ಮದ ಸ್ವತ್ತು ಅಲ್ಲ. ಅದು ಎಲ್ಲ ಧರ್ಮದಲ್ಲಿಯೂ ಇದೆ. ಶಿಕ್ಷಣ ಸಂಸ್ಥೆಗಳಲ್ಲಿ ಗುರುಗಳ ಆಸಕ್ತಿ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಸೇರಿದರೆ ಅದ್ಭುತವಾದ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದು ಹೇಳಿದರು.
Advertisement
ನೈತಿಕ ಮೌಲ್ಯಸ್ಪರ್ಧೋತ್ಸವದ ಪ್ರಧಾನ ತೀರ್ಪುಗಾರ ರಮೇಶ್ ಉಳಯ ಮಾತನಾಡಿ, ತುಳುನಾಡಿನ ಜಾನಪದ ಸಂಸ್ಕೃತಿ, ಆಚಾರ -ವಿಚಾರಗಳು ವಿಶೇಷವಾದ ನೈತಿಕ ಮೌಲ್ಯಗಳನ್ನು ಒಳಗೊಂಡಿವೆ. ನಾವೆಲ್ಲರೂ ಜತೆಯಾಗಿ ಸೇರಿಕೊಂಡು ತುಳು ಮಣ್ಣಿನ ಪರಿಮಳವನ್ನು ನಾಡಿನಾದ್ಯಂತ ಪಸರಿಸುವ ಪುಣ್ಯದ ಕೆಲಸವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ವಿಷ್ಣು ಭಟ್, ಮಾನವಿಕ ಸಂಘದ ಸಂಯೋಜಕ ಪ್ರೊ| ಸುಬೇರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ವಿದ್ಯಾರ್ಥಿ ಸಂಯೋಜಕ ರಾಕೇಶ್ ರಾವ್ ಪಿ.ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಹಸಂಯೋಜಕಿ ಅಕ್ಷತಾ ಶರ್ಮ ವಿ. ಬಹುಮಾನ ವಿಜೇತರ ವಿವರ ನೀಡಿದರು. ವಿದ್ಯಾರ್ಥಿನಿಯರಾದ ದೀಕ್ಷಿತಾ ಸ್ವಾಗತಿಸಿ, ಲತಾಕ್ಷೀ ವಂದಿಸಿದರು. ಸೌಮ್ಯಾ ಕಾರ್ಯಕ್ರಮ ನಿರ್ವಹಿಸಿದರು. ಫಲಿತಾಂಶ
ಫಿಲೋ ಪಂಥೊ -2017 ಜಾನಪದ ಸ್ಪಧೋತ್ಸವದಲ್ಲಿ ಪಾಡªನ, ಕಂಬಳ ಬೋಡು/ಬೊಡಿc ಕುರಿತು ತುಳು ಚರ್ಚೆ, ಮುಂಡಾಸು ಕಟ್ಟುವುದು, ದಾರ ರಹಿತ ಹೂಮಾಲೆ ಕಟ್ಟುವುದು, ಸ್ಮರಣ ಶಕ್ತಿ, ಸೋಬಾನೆ, ಜಾನಪದ ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳನ್ನು ಸಂಯೋಜಿಸಲಾಗಿತ್ತು. ಸಮಗ್ರ ಪ್ರಶಸ್ತಿಯನ್ನು ಪೆರುವಾಜೆಯ ಡಾ| ಶಿವರಾಮ ಕಾರಂತ ಸ.ಪ್ರ.ದ. ಕಾಲೇಜು ತಂಡ, ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಬೆಟ್ಟಂಪಾಡಿ ಸ.ಪ್ರ.ದ. ಕಾಲೇಜು ತಂಡ ಪಡೆದುಕೊಂಡಿತು. ತೃತೀಯ ಸಮಗ್ರ ಪ್ರಶಸ್ತಿಯನ್ನು ಜಿಡೆಕಲ್ಲು ಸ.ಪ್ರ.ದ. ಕಾಲೇಜು ತಂಡ ಪಡೆದುಕೊಂಡಿತು.