Advertisement
ರಂಗಭೂಮಿಯಲ್ಲಿ ಪ್ರತಿನಿತ್ಯವೂ ಒಂದಿಲ್ಲೊಂದು ಹೊಸತನದ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. ಪ್ರತಿ ಬಾರಿಯೂ ಹೊಸ ಕಥೆ, ವಿಷಯಗಳೊಂದಿಗೆ ನಾಟಕಗಳನ್ನು ಪ್ರಸ್ತುತ ಪಡಿಸುವ ರಂಗತಂಡಗಳು ರಂಗಾಸಕ್ತರನ್ನು ಆಕರ್ಷಿಸುವಲ್ಲಿ ಸಫಲತೆ ಕಂಡಿವೆ.
Related Articles
ರಂಗಾಯಣದ ಕಲಾವಿದ ಪ್ರಶಾಂತ್ ಹಿರೇಮs… ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ತಯಾರಾಗಿರುವ ಪಾಶ್ವ ಸಂಗೀತ ನಾಟಕದಲ್ಲಿ 25ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಪೂರ್ಣಚಂದ್ರ, ಮುರುಳಿ ಗುಂಡಣ್ಣ, ಮಂಜುನಾಥ್ ಶಾಸಿŒ, ರವಿಪ್ರಸಾದ್, ಸುಖದೇವ್ ತೇಜಸ್ವಿ, ಶಾಲ್ಮಲಿ ಹಿರೇಮs…, ಬಿ.ಸೀಮಂತಿನಿ, ಚೈತ್ರ, ಗೀತಾ, ಅರ್ಪಿತಾ ಇನ್ನಿತರರು ನಾಟಕದ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
Advertisement
ಇವರ ಜತೆಗೆ ಮಹೇಶ್‌ಕುಮಾರ್ ಅವರ ಸಹ ನಿರ್ದೇಶನ, ರಂಗರೂಪದಲ್ಲಿ ಬಿ.ಪಿ.ಅರುಣ್, ವಿಶ್ವಾಸ್ ಕೃಷ್ಣ ಸಂಗೀತ ನಿರ್ವಹಣೆ ಮಾಡಿದ್ದು, ಎಚ್.ಕೆ.ದ್ವಾರಕಾನಾಥ್ ಅವರ ರಂಗನ್ಯಾಸ, ಕೃಷ್ಣಕುಮಾರ್ ಅವರ ಬೆಳಕಿನ ವಿನ್ಯಾಸ, ಕೆ.ಆರ್. ನಂದಿನಿ ಅವರ ವಸ್ತ್ರವಿನ್ಯಾಸ, ಕಾರ್ತಿಕ್ ಉಪಮನ್ಯು ಅವರ ನೃತ್ಯ ಸಂಯೋಜನೆ, ಬಿ.ಸೀಮಂತಿನಿ ಅವರು ರಂಗನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ನಾಟಕದ ವಿಶೇಷತೆ: ಸಾಮಾನ್ಯವಾಗಿ ಪ್ರತಿಯೊಂದು ರಂಗಪ್ರಯೋಗಗಳು ನಿರ್ದಿಷ್ಟ ಕಥೆ ಅಥವಾ ವಿಷಯವನ್ನು ಇಟ್ಟುಕೊಂಡು ಪ್ರದರ್ಶನ ನಡೆಯಲಿದೆ. ಆದರೆ ಪಾಶ್ವ ಸಂಗೀತ ನಾಟಕವು 1940 ರಿಂದ 70ರ ದಶಕದವರೆಗಿನ, ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗೆ ಅವಿನಾಭಾವ ಸಂಬಂಧಗಳನ್ನು ರಂಗದ ಮೇಲೆ ತೆರೆದಿಡುವ ಪ್ರಯತ್ನವಾಗಿದೆ.
ಹಿಂದಿ ಗಾಯನ ಲೋಕದಲ್ಲಿ ಎಲ್ಲರ ಮನಸ್ಸಿನಲ್ಲಿ ಉಳಿದಿರುವ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮ್ಮದ್ ರಫಿ, ಶಂಶಾದ್ ಬೇಗಂ, ಕಿಶೋರ್‌ಕುಮಾರ್, ಲತಾ ಮಂಗೇಶ್ಕರ್, ಮನ್ನಾಡೇ ಅವರ ಕಂಠಸಿರಿಯ ಹಲವು ಚಿತ್ರಗೀತೆಗಳ ಮೂಲಕ ನಾಟಕವನ್ನು ಕಟ್ಟಿಕೊಡಲಾಗಿದೆ. ಈ ಗೀತೆಗಳ ಮೂಲಕ ನಿರೂಪಕ ತನ್ನ ಬಾಲ್ಯದ ಅನುಭವಗಳನ್ನು ಹಳೆಯ ಹಿಂದಿ ಚಿತ್ರಸಂಗೀತದ ಯುಗವನ್ನು ನೆನಪಿಸಿಕೊಳ್ಳುತ್ತಾ, ತನ್ನ ಚಿಕ್ಕಪ್ಪನ ಜೀವನವನ್ನು ತೆರೆದಿಡುವುದು ನಾಟಕದ ವಿಶೇಷ.
* ಸಿ.ದಿನೇಶ್