Advertisement

ಜಾನಪದ ಪರಂಪರೆ ರಕ್ಷಣೆ ಎಲ್ಲರ ಜವಾಬ್ದಾರಿ: ವಾಲೀಕಾರ

06:38 PM Sep 02, 2021 | Team Udayavani |

ವಿಜಯಪುರ: ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಎನಿಸಿದೆ. ಜಾನಪದ ನುಡಿಗಳು ವೇದಕ್ಕೆ ಸಮಾನವಾಗಿದ್ದು, ನಮ್ಮ ಪರಂಪರೆಯ ಜೀವಂತಿಕೆ ಇರುವ ಜಾನಪದ ಸಾಹಿತ್ಯ ಹಾಗೂ ಕಲೆಗಳ ಸಂರಕ್ಷಣೆ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ್‌ ವಾಲೀಕಾರ ಅಭಿಪ್ರಾಯಪಟ್ಟರು.

Advertisement

ತಿಕೋಟಾ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್‌ ಹಾಗೂ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.ಭವಿಷ್ಯದಲ್ಲಿ ಸಮಾಜದಲ್ಲಿರುವ ನಮ್ಮಯುವ ಪೀಳಿಗೆಗೆಈ ಪರಂಪರೆಯನ್ನು ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು. ಕನ್ನಡಜಾನಪದ ಪರಿಷತ್‌ ಜಿಲ್ಲಾಧ್ಯಕ್ಷಬಾಳನಗೌಡ ಪಾಟೀಲ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಜಾನಪದರು ಹೇಳದ ವಿಷಯಗಳಿಲ.ಜಾನಪದರು ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಿರತವಾಗಿದ್ದರೂ ಅನಕ್ಷರಸ್ತರಾಗಿದ್ದರೂ ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು.

ಅಲಿಖಿತ ಸಾಹಿತ್ಯದ ನಿರಂತರ ಪ್ರಸಾರದ ಮೂಲಕವೇ ತಮ್ಮ ನೋವು ನಲಿವುಗಳನ್ನು ಸಂವೇದಿಸುತ್ತಿದ್ದು. ಆದರೆ ಆಧುನಿಕತೆ ತಾಂತ್ರಿಕ ಯುಗದಲ್ಲಿ ಇಂಗಿನ ಯುವ ಸಮೂಹ ಟಿವಿ, ಮೊಬೈಲ್‌, ಅಂತರ್ಜಾಲದಂಥ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಭವಿಷ್ಯದ ಯುವ ಜನಾಂಗಕ್ಕೆ ಜಾನಪದಕಲೆ, ಸಾಹಿತ್ಯದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕನ್ನಡ ಜಾನಪದ ಪರಿಷತ್‌ ತಿಕೋಟಾ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಕಲಘಟಗಿ ಮಾತನಾಡಿ, ಭೂಮಿ ಮೇಲೆ ಮಾನವ ಜನಾಂಗ ಯಾವಾಗ ಹುಟ್ಟಿತೋ ಅಂದೇ ಜಾನಪದ ಹುಟ್ಟಿತು. ಜಾನಪದದ ಕುರಿತು ಹಲವರು ಪರಿಣಿತರಿದ್ದಾರೆ. ಯಾವುದೇ ಶಾಲೆ-ವಿಶ್ವವಿದ್ಯಾಲಯದಲ್ಲಿ ಕಲಿಯದೇ, ಅಕ್ಷರದ ಜ್ಞಾನ ಇಲ್ಲದಿದ್ದರೂ ಸಮಾಜದಲ್ಲಿ ಪರಂಪರೆಯಿಂದ ಹರಿದು ಬಂದಿದ್ದ ಜ್ಞಾನದಿಂದಲೇ ಕಾವ್ಯಗಳನ್ನು ರಚಿಸುತ್ತಿದ್ದರು‌. ಬದುಕಿನ ಅನುಭವಗಳೇ ಅವರಿಗೆ ವಿಶ್ವವಿದ್ಯಾಲಯಕ್ಕೂ ಮೀರಿದ ಸಾತ್ವಿಕ ಬದುಕಿನ ಶಿಕ್ಷಣ ನೀಡುತ್ತಿದ್ದವು ಎಂದು ವಿವರಿಸಿದರು.

Advertisement

ಪ್ರವಚನಕಾರ ಬಾಬುರಾವ್‌ ಮಹಾರಾಜ್‌ ಮಾತನಾಡಿ, ಬ್ರಹ್ಮಾಂಡದ ಮೂಲ ಉತ್ಪತ್ತಿಯೇ ಓಂಕಾರದಿಂದ ರೂಪಿತವಾಗಿದೆ. ಜಾನಪದ ಸಾಹಿತ್ಯ ಅಮ್ಮನ ಲಾಲಿ ಹಾಡಿನಿಂದ ಹಿಡಿದು ಹಂತಿಯ ಹಾಡು, ಮದುವೆ ಹಾಡು, ಬೀಸುವ ಕಲ್ಲಿನ ಹಾಡು ಮುಂತಾದವು ಜಾನಪದ ಸಾಹಿತ್ಯ ಹಾಗೂ ಕಲೆಗಳ ಆಗರವಾಗಿವೆ ಎಂದರು. ಗೀರಥಿತೇಲಿ,ಎಂ.ಎಸ್‌.ಯಚ್ಚಿ,ಪ್ರಾಚಾರ್ಯ ಎಸ್‌.ಪಿ. ಮದ್ರೇಕರ, ಚಂದ್ರಶೇಖರಯ್ಯ ಹಿರೇಮಠ, ಧರೆಪ್ಪ ಪಚ್ಚಾಪುರ, ಶಂಕ್ರಪ್ಪ ಶಿವನಾಕರ, ಕೆಂಚಪ್ಪ ಬೆಳಗಾವಿ, ಶಟವ್ವ ಮಾದರ, ಶಫೀಕ್‌ ಹಡಗಲಿ, ಮಧು ಖೋತ ,ಅನಿಲ ಖೋತ, ಶರಣು ಕಂಠಿ, ಖೋತ, ಐ.ಕೆ. ನದಾಫ್‌, ಎಸ್‌.ಆರ್‌. ಲಕ್ಕೊಂಡ, ಧರೆಪ್ಪ
ಹಡಪದ, ಚಂದ್ರಶೇಖರ ಹಿರೇಮಠ, ಬಸವರಾಜ ತಳವಾರ, ಕೊಣ್ಣೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next