ರಾಯಚೂರು: ಜಿಲ್ಲೆಯ ಹಗಲುವೇಷ ಕಲಾವಿದರಾದ ಜಂಬಣ್ಣ ಹಸಮಕಲ್ ಅವರನ್ನು ಕರ್ನಾಟಕ ಜಾನಪದಅಕಾಡೆಮಿಯ 2020ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಐದು ದಶಕಗಳಿಂದ ಹಗಲು ವೇಷ ಕಲಾವಿದರಾಗಿರುವ ಜಂಬಣ್ಣ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ನಿವಾಸಿಯಾಗಿರುವ ಜಂಬಣ್ಣ ಅವರು, ಕಳೆದ 48 ವರ್ಷಗಳಿಂದ ಹಗಲು ವೇಕಲಾವಿದರಾಗಿ ದುಡಿಯುತ್ತಿದ್ದಾರೆ. ಜಾನಪದ ಕಲೆಯಲ್ಲಿಹಗಲುವೇಷಕ್ಕೂ ವಿಶೇಷ ಸ್ಥಾನಮಾನ ಹೊಂದಿದೆ.
ಹಗಲುವೇಷ ಕಲಾವಿದ ಜಂಬಣ್ಣ ಅವರು ಜಿಲ್ಲೆಸೇರಿದಂತೆ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಖ್ಯಾತಿಗಳಿಸಿದ್ದಾರೆ. ಪಕ್ಕದ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಜ.1,1957ರಲ್ಲಿ ಶಂಕರಪ್ಪ, ಮಾರೆಮ್ಮ ದಂಪತಿಗೆ ಜನಿಸಿದ ಜಂಬಣ್ಣ ತಮ್ಮ 14 ನೇ ವಯಸ್ಸಿನಿಂದಲೆಯೇ ಅಲೆಮಾರಿ ಬುಡಗಟ್ಟು ಕಲಾವಿದರಾಗಿ ತಮ್ಮ ತಾವು ತೊಡಗಿಸಿಕೊಂಡಿದ್ದಾರೆ.
ಹಗಲು ವೇಷದಲ್ಲಿ ಬಸ್ಮಾಸುರ, ದ್ರೌಪದಿ, ರಾವಣ, ರಾಮ, ಭೀಮ, ದುರ್ಯೋಧನ ಪಾತ್ರಗಳಲ್ಲಿ ಅಭಿನಯಿಸಿ ಅನೇಕ ಕಡೆಗಳಲ್ಲಿ ಪ್ರದರ್ಶನ ಮಾಡಿದ್ದಾರೆ.ಜಂಬಣ್ಣ ಕೇವಲ ಗಾಯನ, ಹಗಲು ವೇಷವಷ್ಟೇ ಅಲ್ಲ ಸಂಗೀತ ವಾದ್ಯಗಳಾದ ಹಾರೊ¾àನಿಯಂ, ತಬಲ, ತಾಳ ಹಾಗೂ ಮತ್ತಿತರ ವಾದ್ಯಗಳನ್ನು ಸಹ ನುಡಿಸುವ ಕಲೆ ಹೊಂದಿದ್ದಾರೆ.
ಹಗಲುವೇಷ ಕಲಾವಿದನಾಗಿರುವ ನಾನು ಕಳೆದ 48 ವರ್ಷಗಳಿಂದಲೂ ಅನೇಕ ಕಲಾಪ್ರದರ್ಶನ ನೀಡಲಾಗಿದೆ. ಈಗ ಕರ್ನಾಟಕಜಾನಪದ ಅಕಾಡೆಮಿಯು ನನ್ನ ಕಲೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಿರುವುದು ಸಂಸತ ತಂದಿದೆ.
– ಜಂಬಣ್ಣ ಹಸಮಕಲ್,
ಹಗಲುವೇಷ ಹಿರಿಯ ಕಲಾವಿದ