Advertisement

ವಿಜಯನಗರ ಜಿಲ್ಲೆ ಉದ್ಘಾಟನೆ ವೈಭವಕ್ಕೆ ತೆರೆ

11:43 PM Oct 03, 2021 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆ ಉದ್ಘಾಟನೆ ಹಾಗೂ ವಿಜಯನಗರ ವೈಭವ ಉತ್ಸವಕ್ಕೆ ರವಿವಾರ ತೆರೆ ಬಿದ್ದಿತು.

Advertisement

ನಗರದ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಹಂಪಿ ಪ್ರಸಿದ್ಧ ಸ್ಮಾರಕಗಳನ್ನೊಳಗೊಂಡ ವಿದ್ಯಾರಣ್ಯ ವೇದಿಕೆಯಲ್ಲಿ ರವಿವಾರ ಜರಗಿದ ಸಮಾರೋಪ ಸಮಾರಂಭದಲ್ಲಿ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದ ಸಿಂಗ್‌ ಮಾತನಾಡಿ, ಅಧಿಕಾರ ಶಾಶ್ವತ ವಲ್ಲ. ಅಧಿಕಾರದಲ್ಲಿದ್ದಾಗ ನಾವು ಮಾಡಿದ ಉತ್ತಮ ಕಾರ್ಯಗಳು ಇತಿಹಾಸದಲ್ಲಿ ಉಳಿಯುವಂತಾಗಬೇಕು. ಈ ಉದ್ದೇಶ ದಿಂದ ವಿಜಯನಗರ ಜಿಲ್ಲೆ ರಚನೆಗಾಗಿ ನಾನು ಅಧಿಕಾರ ತ್ಯಾಗ ಮಾಡಿದ್ದೆ ಎಂದರು.

ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಮಾತನಾಡಿ, ಹೊಸ ಜಿಲ್ಲೆಯ ದೀರ್ಘ‌ ಕಾಲದ ಕನಸನ್ನು ನನಸು ಮಾಡಿದ ಶ್ರೇಯ ಆನಂದ ಸಿಂಗ್‌ಗೆ ಸಲ್ಲುತ್ತದೆ ಎಂದರು.

ಸಚಿವರಾದ ಬಿ.ಸಿ.ಪಾಟೀಲ್‌, ಶಿವರಾಂ ಹೆಬ್ಟಾರ್‌, ಡಾ| ಕೆ.ಸಿ.ನಾರಾಯಣಗೌಡ, ಚಲನಚಿತ್ರ ನಟ ಅಜಯ ರಾವ್‌ ಮೊದಲಾದವರು ಮಾತನಾಡಿ ದರು. ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ ವೀಡಿಯೋ ಸಂದೇಶದ ಮೂಲಕ ಶುಭ ಹಾರೈಸಿದರು. ಜಿಲ್ಲೆಯ ಹಿರಿಮೆ ಸಾರುವ ವಿಡಿಯೋ ಪ್ರದರ್ಶಿಸಲಾಯಿತು.

ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

Advertisement

ರಾಜಬೀದಿಯಲ್ಲಿ ಭವ್ಯ ಮೆರವಣಿಗೆ
ಡೊಳ್ಳು ಕುಣಿತ, ಪೂಜೆ ಕುಣಿತ, ಪಟ ಕುಣಿತ, ಕಂಸಾಳೆ ಕುಣಿತ, ಹಗಲುವೇಷಧಾರಿಗಳ ವಿಭಿನ್ನ ವೇಷ ಹಾಗೂ ಕಹಳೆ ನಾದಕ್ಕೆ ಸಾಕ್ಷಿಯಾಗಿ 101 ಜೋಡಿಗಳ ಎತ್ತಿನ ಬಂಡಿಯ ಮೆರವಣಿಗೆ ನಗರದ ರಾಜಬೀದಿಯಲ್ಲಿ ನಡೆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next