Advertisement

ಜಾನಪದ ಕಲೆ ಉಳಿವಿಗೆ ಶ್ರಮಿಸಿ

12:53 PM Dec 11, 2017 | Team Udayavani |

ಬೀದರ: ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ಇಂತಹ ಜಾನಪದ ಜಾತ್ರೆಗಳು ಹೆಚ್ಚಾಗಿ ಸಂಘಟಿತವಾಗಬೇಕಿದೆ ಎಂದು ಸಿಪಿಐ ಶರಣಬಸಪ್ಪ ಭಜಂತ್ರಿ ಕರೆ ನೀಡಿದರು. ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ತು ಮತ್ತು ಕದಂಬ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಾನಪದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪಾಶ್ಚಾತ್ಯರು ಈ ದೇಶ ಆಳಲು ಬಂದಾಗಿನಿಂದ ಎಲ್ಲ ರೀತಿಯ ಅವಾಂತರಗಳು ಸೃಷ್ಟಿಯಾದಂತೆ ಜಾನಪದ ಸಂಸ್ಕೃತಿಗೂ ಕುತ್ತು ಬಂದೊದಗಿದೆ. ಯುವಕರು ದುಶ್ಚಟಗಳ ದಾಸರಾಗಿ ಮಾನವಿಯ ಸಂಸ್ಕೃತಿಯನ್ನೇ ಮರೆತಿದ್ದಾರೆ. ಚಲನಚಿತ್ರ ಮಾದರಿಯಲ್ಲಿ ಜಗತ್ತಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ಕೊಟ್ಟ ಜಾನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸಬೇಕು ಎಂದರು.

ಬ್ರಿಮ್ಸ್‌ ಗ್ರಾಮೀಣ ಆರೊಗ್ಯ ತರಬೇತಿ ಕೇಂದ್ರದ ಮುಖ್ಯಸ್ಥ ಡಾ| ಮಹೇಶ ತೊಂಡಾರೆ ಮಾತನಾಡಿ, ಜಾನಪದ ಕಲೆ ಹಾಗೂ ಸಂಗೀತ ಕೇವಲ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ. ಎಲ್ಲ ಭಾಷೆಗಳ ಪಠ್ಯಕ್ರಮದಲ್ಲಿ ಜಾರಿಗೆ ಬರಬೇಕಿದೆ. ಜಾನಪದ ಸಂಸ್ಕೃತಿಯನ್ನು ವೈಜ್ಞಾನಿಕ ರೀತಿಯಲ್ಲಿ ಗುರುತಿಸಿದಲ್ಲಿ ಅದರಲ್ಲಿ ಅಡಕವಾಗಿರುವ ನ್ಯೂನ್ಯತೆ ನೀಗಿಸಿ, ನೈಜ ಸಂಸ್ಕೃತಿ ಮರುಕಳಿಸಲಿದೆ ಎಂದು ಹೇಳಿದರು.

ಜಾನಪದ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಮಂಗನಾಗಿದ್ದವನು ಜಾನಪದ ಸಂಸ್ಕೃತಿಯಿಂದ ಮಾನವನಾದ. ತನ್ನ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಲು ಅದರಲ್ಲಿನ ಕಲೆ ಹಾಗೂ ಸಾಹಿತ್ಯ ಮೈಗೂಡಿಸಿಕೊಂಡು ಬುದ್ಧಿವಂತನಾದ. ಇತರರು ಮಾಡುವ ಪ್ರದರ್ಶನ ಗಮನಿಸಿ ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ತನ್ನ ಪ್ರತಿಭೆ ಹೆಚ್ಚಸಿಕೊಂಡನು. ತನ್ನ ಇಡೀ ಜೀವನ ಜಾನಪದವನ್ನಾಗಿಸಿಕೊಂಡವನೇ ಒಬ್ಬ ಮಹಾನ್‌ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.

ರಾಷ್ಟ್ರೀಯ ಜಾನಪದ ಬುಡಕಟ್ಟು ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಪ್ರಾಸ್ತಾವಿಕ ಮಾತನಾಡಿದರು. ವಾರ್ತಾ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಮಾಜಿ ಸದಸ್ಯ ಶಿವಯ್ಯಸ್ವಾಮಿ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಅಧ್ಯಕ್ಷ ಪ್ರೊ| ಎಸ್‌.ಬಿ ಬಿರಾದಾರ, ಕರ್ನಾಟಕ ಸಾಹಿತ್ಯ ಸಂಘದ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ, ಪ್ರಮುಖರಾದ ಡಾ| ಧನಲಕ್ಷ್ಮೀ ಪಾಟೀಲ, ಲಕ್ಷ್ಮಣರಾವ್‌ ಕಾಂಚೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಸಂಜೀವಕುಮಾರ ಸ್ವಾಮಿ, ಲಿಂಗಪ್ಪ ಮಡಿವಾಳ ಸೇರಿದಂತೆ ಮತ್ತಿತರರು ಇದ್ದರು. ಪರಿಷತ್‌ ತಾಲೂಕು ಅಧ್ಯಕ್ಷ ಎಸ್‌.ಬಿ. ಕುಚಬಾಳ್‌ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next