ಶಿಯೋಮಿ ಕಂಪನಿ, ಸ್ಮಾರ್ಟ್‌ಫೋನ್‌ಗಳನ್ನು ಮಾತ್ರವಲ್ಲ, ಹಲವು ಗೃಹ ಬಳಕೆಯ ಉಪಕರಣಗಳನ್ನೂ ತಯಾರಿಸುತ್ತದೆ. ಟಿ.ವಿ., ಇಯರ್‌ಫೋನ್, ಟ್ರಿಮ್ಮರ್, ಶೂ, ಕ್ಯಾಮೆರಾ ಇತ್ಯಾದಿ ಉಪಕರಣಗಳು, ಶಿಯೋಮಿಯಿಂ ದ ತಯಾರಾಗುತ್ತವೆ. ಇತ್ತೀಚೆಗಷ್ಟೆ, ತನ್ನ ಹೊಸ ಆವಿಷ್ಕಾರ ವಾದ ಫೋಲ್ಡೆಬಲ್ ಫ್ಯಾನ್ ಅನ್ನು ಶಿಯೋಮಿ ಸಂಸ್ಥೆ, ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಇದನ್ನು ಪೆಟ್ಟಿಗೆಯಂತೆ ಮಡಚಿ, ಬೇಕೆಂದಲ್ಲಿಗೆ ಕೊಂಡೊಯ್ಯ ಬಹುದಾಗಿದೆ. ಇದರ ಡಿಸೈನ್ ತುಂಬಾ ಸ್ಮಾರ್ಟ್ ಆಗಿದೆ. ಇದರಲ್ಲಿ ಒಂದೇ ಒಂದು ಸ್ಕ್ರೂ ಕಾಣುವುದಿಲ್ಲ. ಇದನ್ನು “ಒನ್ ಪೀಸ್ ಡಿಸೈನ್’ ಎಂದು ಸಂಸ್ಥೆ ಕರೆದಿದೆ. ಈ ಫೋಲ್ಡೆಬಲ್ ಫ್ಯಾನನ್ನು ಮಡಚಲು, ಯಾವುದೇ ಸ್ಕೃೂ ಅನ್ನು ಬಿಚ್ಚಿ ಜೋಡಿಸಬೇಕಿಲ್ಲ. ಫ್ಯಾನನ್ನು 120 ಡಿಗ್ರಿ ಎಡದಿಂದ ಬಲಕ್ಕೆ ತಿರುಗಿಸಬಹುದು ಮತ್ತು ಮೇಲಿನಿಂದ ಕೆಳಕ್ಕೆ, ಪೂರ್ತಿ 360 ಡಿಗ್ರಿ ತಿರುಗಿಸಬಹುದಾಗಿದೆ.
ಇದು ಮಲ್ಟಿಪರ್ಪಸ್ ಫ್ಯಾನ್ ಕೂಡಾ ಆಗಿದೆ. ಅಂದರೆ, ಈ ಉಪಕರಣ ಫ್ಯಾನ್ ಮಾತ್ರವೇ ಅಲ್ಲ, ಪ್ಯೂರಿಫೈಯರ್ ಕೂಡಾ ಇದರಲ್ಲಿ ಅಡಕವಾಗಿದೆ. ಕೆಳಗಿನ ಭಾಗ ಪ್ಯೂರಿಫೈಯರ್/ ಹ್ಯುಮಿಡಿಫೈಯರ್ ಆಗಿ ಕಾರ್ಯ ನಿರ್ವಹಿ ಸುತ್ತದೆ. ಫ್ಯಾನನ್ನು ನಿಯಂತ್ರಿಸಲು, ರಿಮೋಟ್ ಕಂಟ್ರೋಲರ್ ಅನ್ನು ನೀಡಲಾಗಿದೆ. ಇದು, 80 ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತದೆ. ಅದರಿಂದ ಪ್ಯೂರಿಫೈಯರ್ ಮತ್ತು ಫ್ಯಾನ್ ವೇಗವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ. ರಿಮೋಟ್ ಹೊರತಾಗಿ, ಟಚ್ ಪ್ಯಾನೆಲ್ ಬಳಸಿಯೂ ಫ್ಯಾನನ್ನು ನಿಯಂತ್ರಿಸ ಬಹು ದಾಗಿದೆ.
ಈ ಉಪಕರಣ, ಒಂದೂವರೆ ಕೆ.ಜಿ. ತೂಗುತ್ತದೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ, ಇದನ್ನು ಟೇಬಲ್ ಫ್ಯಾನ್ ಆಗಿಯೂ, ಸ್ಟ್ಯಾಂಡ್ ಫ್ಯಾನ್ ಆಗಿಯೂ ಬಳಸಬಹುದಾಗಿದೆ. ಏರಿಯಲ್ ಆಂಟೆನಾ ಮಾದರಿಯಲ್ಲಿ, ಈ ಫ್ಯಾನಿನ ಕತ್ತನ್ನು ವಿನ್ಯಾಸಗೊಳಿಸಲಾಗಿದೆ. ಏರಿಯಲ್ ಅನ್ನು ಯಾವ ರೀತಿ ಎಳೆದು ಉದ್ದ ಮಾಡಲಾಗುತ್ತದೆಯೋ, ಅದೇ ರೀತಿ ಈ ಫ್ಯಾನಿನ ಕತ್ತನ್ನು, ನಮಗೆ ಬೇಕಾದ ಎತ್ತರಕ್ಕೆ ಎಳೆದುಕೊಳ್ಳಬಹುದಾಗಿದೆ.