Advertisement

German company; ಖಾಸಗಿತನ ರಕ್ಷಣೆಗಾಗಿ ಡಿಜಿಟಲ್‌ ಕಾಂಡೋಮ್‌

01:53 AM Oct 28, 2024 | Team Udayavani |

ಹೊಸದಿಲ್ಲಿ: ಖಾಸಗಿ ಸಮಯದಲ್ಲಿನ ಚಿತ್ರ, ಮಾತುಗಳ ಸಹಿತ ಕಳೆದ ಕ್ಷಣಗಳು ಸೋರಿಕೆಯಾಗುವುದನ್ನು ತಡೆಯಲು ಜರ್ಮನಿಯ ಬಿಲ್ಲಿ ಬಾಯ್‌ ಕಂಪೆನಿ ಆ್ಯಪ್‌ವೊಂದನ್ನು ತಯಾರಿಸಿದೆ. ಇದನ್ನು ಕಂಪೆ‌ನಿ ಡಿಜಿಟಲ್‌ ಕಾಂಡೋಮ್‌ ಎಂದು ಕರೆದಿದೆ.

Advertisement

ಖಾಸಗಿ ಸಮಯದಲ್ಲಿ “ಕಾಮ್‌ಡಾಮ್‌’ ಹೆಸರಿನ ಈ ಆ್ಯಪನ್ನು ಮೊಬೈಲ್‌ನಲ್ಲಿ ಆನ್‌ ಮಾಡಿಟ್ಟರೆ, ಅದು ಮೊಬೈಲನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಎಲ್ಲಾ ಕೆಮರಾ ಮತ್ತು ಧ್ವನಿ ರೆಕಾರ್ಡ್‌ ಮಾಡುವ ಆ್ಯಪ್‌ಗ್ಳನ್ನು ರದ್ದು ಮಾಡುತ್ತದೆ. ಹೀಗಾಗಿ ಕೆಮರಾ, ರೆಕಾರ್ಡರ್‌ಗಳನ್ನು 3ನೇ ವ್ಯಕ್ತಿ ಬಳಕೆ ಮಾಡಲು ಇದು ಅವಕಾಶ ಕೊಡುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ಆಡಿದ ಮಾತುಗಳು, ಚಿತ್ರಗಳು ಸೋರಿಕೆಯಾಗಲ್ಲ ಎಂದು ಕಂಪೆನಿ ಹೇಳಿದೆ. ಜರ್ಮನಿ ಸೇರಿದಂತೆ 30 ದೇಶಗಳಲ್ಲಿ ಈ ಆ್ಯಪ್‌ ಲಾಂಚ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next