Advertisement

ಹುಬ್ಬಳ್ಳಿಯಲ್ಲಿ ಮಂಜು ಕವಿದ ವಾತಾವರಣ: 25 ನಿಮಿಷ ಸುತ್ತಾಡಿ ಲ್ಯಾಂಡ್ ಆದ ವಿಮಾನ

12:15 PM Oct 08, 2020 | keerthan |

ಹುಬ್ಬಳ್ಳಿ: ಗುರುವಾರ ಬೆಳಗ್ಗೆ ಮುಸುಕಿನ ವಾತಾವರಣವಿದ್ದ ಪರಿಣಾಮ ಮುಂಬಯಿ-ಹುಬ್ಬಳ್ಳಿ ಇಂಡಿಗೋ ವಿಮಾನ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿ, ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

Advertisement

ಮುಂಬಯಿಯಿಂದ ಬೆಳಗ್ಗೆ 8:00 ಗಂಟೆಗೆ 65 ಪ್ರಯಾಣಿಕರೊಂದಿಗೆ ಸರಿಯಾದ ಸಮಯಕ್ಕೆ ನಗರಕ್ಕೆ ಆಗಮಿಸಿದ ಇಂಡಿಗೊ ವಿಮಾನ, ಆಕಾಶದಲ್ಲಿ ಸುಮಾರು 4 ಕಿಮೀ ಅಂತರದಲ್ಲಿ ಮಂಜು ಕವಿದ ವಾತಾವರಣ ಇದುದ್ದರಿಂದ ಸುಮಾರು 25 ನಿಮಿಷ ಆಕಾಶದಲ್ಲಿ ಸುತ್ತಾಡಿತು. ಮುಸುಕಿದ್ದ ಮಂಜು ತಿಳಿಯಾದ ಮೇಲೆ ಎಟಿಸಿ ಸಿಗ್ನಲ್ ದೊರೆತ ಕೂಡಲೇ 8:23 ಗಂಟೆಗೆ ಸುರಕ್ಷಿತವಾಗಿ ರನ್ ವೇ ಗೆ ಇಳಿಯಿತು.

ಇದನ್ನೂ ಓದಿ:ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ನಂತರ ವಿಮಾನ ಹತ್ತು ನಿಮಿಷ ತಡವಾಗಿ 8:50 ಗಂಟೆಗೆ ಮರಳಿ ಮುಂಬಯಿಗೆ 70 ಪ್ರಯಾಣಿಕರೊಂದಿಗೆ ಯಾನ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next