ಕಾಪು: ಕರಾವಳಿಯಾದ್ಯಂತ ಗುರುವಾರ ಮುಂಜಾನೆ ಭಾರೀ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಈ ಬಾರಿ ಚಳಿಗಾಲದುದ್ದಕ್ಕೂ ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದ್ದು ಚಳಿಯ ಕಾರಣದಿಂದಾಗಿ ಎಲ್ಲೆಡೆ ಮುಸುಕಿದ ವಾತಾವರಣ ಕಂಡು ಬಂದಿದೆ.
ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು ವಾಹನ ಸವಾರರಿಗೆ ಸಂಚಾರಕ್ಕೆ ತೊಡಕುಂಟಾಗಿದೆ.
ಸೂರ್ಯೋದಯದ ವೇಳೆಯಲ್ಲಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.
ಅನಿರೀಕ್ಷಿತವಾಗಿ ಕಾಣಿಸಿಕೊಂಡಿರುವ ಮಂಜು ಮಲ್ಲಿಗೆ ಬೆಳೆ, ಹೂ ಬಿಟ್ಟಿರುವ ಮಾವು, ಹಲಸು, ಗೇರು ಸಹಿತ ವಿವಿಧ ಬೆಳೆಗಳಿಗೆ ಮಾರಕವಾಗಲಿದ್ದು ಪ್ರಾಕೃತಿಕ ವೈಪರೀತ್ಯಕ್ಕೂ ಕಾರಣವಾಗುವ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಟಪಾಡಿ: ಕರಾವಳಿಯ ಪರಿಸರದಲ್ಲಿ ಗುರುವಾರ ಬಹುತೇಕ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ. ಬೆಳಗಾಗುತ್ತಿದಂತೆ ಮತ್ತಷ್ಟು ದಟ್ಟ ಮಂಜು ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡೆ ಓದಾಡುವ ಪ್ರಮೇಯ ಬಂದೋದಾಗಿತ್ತು.
ಮಂಜಿನ ದಟ್ಟಣೆಯು ಮತ್ತಷ್ಟು ಹೆಚ್ಚುಗೊಳ್ಳುತ್ತಿದ್ದೂ ಗಾಳಿಯೊಂದಿಗೆ ಚಲಿಸಿ ನೆರೆಹೊರೆಯ ಮನೆಯು ಕಾಣಿಸಷ್ಟು ದಟ್ಟ ಮಂಜು ಮುಸುಕಿತ್ತು.
ಕಟಪಾಡಿ ಪರಿಸರದ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಇದೇ ಸ್ಥಿತಿ ಮುಂದುವರೆದಿತ್ತು.