Advertisement

“ಪೋಷಣೆ ಕಡೆಗೆ ಗಮನಹರಿಸಬೇಕು’

02:25 AM Jul 14, 2017 | Team Udayavani |

ಬಲ್ನಾಡು : ಪುತ್ತೂರು ವಲಯ ಅರಣ್ಯ ಇಲಾಖೆ ಆಶ್ರಯದಲ್ಲಿ ಸಾಜ ಸರಕಾರಿ ಹಿ.ಪ್ರಾ. ಶಾಲೆ ಮತ್ತು ಪರಿಶಿಷ್ಟ ವರ್ಗ ವಿದ್ಯಾರ್ಥಿಗಳ ಸರಕಾರಿ ಆಶ್ರಮ ಶಾಲೆಯಲ್ಲಿ ಗುರುವಾರ ಕೋಟಿವೃಕ್ಷ ಆಂದೋಲನ, ಮಗುವಿಗೊಂದು ಮರ, ಶಾಲೆಗೊಂದು ವನ, ವನಮಹೋತ್ಸವ ನಡೆಯಿತು.

Advertisement

ಶಾಸಕಿ ಶಕುಂತಳಾ ಟಿ. ಶೆಟ್ಟಿ ಗಿಡ ನೆಟ್ಟು ಉದ್ಘಾಟಿಸಿ ಮಾತನಾಡಿ, ಹಸಿರು ಸಂಪತ್ತು ವೃದ್ಧಿಯಿಂದ ಪರಿಸರದಲ್ಲಿ ಸಮತೋಲನ ಉಂಟಾಗಲು ಸಾಧ್ಯವಿದೆ. ಹಾಗಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಗಿಡ ನೆಟ್ಟರೆ ಮಾತ್ರ ಸಾಲದು. ನೆಟ್ಟ ಗಿಡವನ್ನು ಉಳಿಸುವ ನಿಟ್ಟಿನಲ್ಲೂ ನಮ್ಮ ಗಮನ ಇರಬೇಕು ಎಂದರು.

ಹಸಿರು ಸಂಪತ್ತನ್ನು ಉಳಿಸಿ
ಪ್ರಕೃತಿ ವಿಕೋಪಕ್ಕೆ ಪರಿಸರದಲ್ಲಿನ ಅಸಮತೋಲನ ಕಾರಣ. ಹಸಿರು ಸಂಪತ್ತನ್ನು ನಾಶ ಮಾಡುವ ಬದಲು ಉಳಿಸುವ ಅಗತ್ಯ ಇಂದಿದೆ. ಇಲ್ಲದಿದ್ದರೆ ಬರ, ಮಳೆ ಅಭಾವ ತೀವ್ರ ಸ್ವರೂಪ ಪಡೆದುಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದರು.

ಜಾಗೃತಿ ಮೂಡಿಸಿ
ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ. ಸದಸ್ಯ ರಾಧಾಕೃಷ್ಣ ಆಳ್ವ ಸಾಜ ಮಾತನಾಡಿ, ಮರ, ಗಿಡ ಸಂರಕ್ಷಿಸುವ, ಬೆಳೆಸುವ ಬಗ್ಗೆ ಹೆಚ್ಚು ಗಮನ ವಹಿಸಬೇಕು. 

ಇದು ನಮ್ಮ ಜವಾಬ್ದಾರಿ ಎಂದು ಅರಿತು, ಕಾಳಜಿ ತೋರಬೇಕು ಎಂದ ಅವರು, ಮಕ್ಕಳಲ್ಲಿ ಇಂತಹ ಜಾಗೃತಿ ಮನೋಭಾವ ಮೂಡಿಸುವ ಆವಶ್ಯಕತೆ ಹೆಚ್ಚಿದೆ ಎಂದರು.ಈ ಸಂದರ್ಭ ಬಲಾ°ಡು ಗ್ರಾ.ಪಂ. ಅಧ್ಯಕ್ಷೆ ವಿನಯಾ ಬಲಾ°ಡು, ಗ್ರಾ.ಪಂ. ಸದಸ್ಯ ಬಾಲಕೃಷ್ಣ, ಆಶ್ರಮ ಶಾಲಾ ಮುಖ್ಯ ಶಿಕ್ಷಕಿ ಅನ್ನಪೂರ್ಣಮ್ಮ, ಸಾಜ ಸರಕಾರಿ ಹಿ.ಪ್ರಾ. ಶಾಲಾ ಮುಖ್ಯಗುರು ಜಯರತ್ನ ಮೊದಲಾದವರು ಉಪಸ್ಥಿತರಿದ್ದರು.

Advertisement

ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ ಸ್ವಾಗತಿಸಿ, ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ವಂದಿಸಿದರು. ಉಪ ವಲಯ ಅರಣ್ಯಾಧಿ ಕಾರಿ ಸಂತೋಷ್‌ ಕೆ. ನಿರೂಪಿಸಿದರು. ಯೂಸುಫ್‌ ಮತ್ತು ಗಣೇಶ್‌ ಭಟ್‌ ಸಹಕಾರ ನೀಡಿದರು.

ಸಹಾಯಧನ
ಎಸಿಎಫ್‌ ಸುಬ್ರಹ್ಮಣ್ಯ ರಾವ್‌ ಮಾತ ನಾಡಿ, ಅರಣ್ಯ ಇಲಾಖೆಯ ಮೂಲಕ ಹಸಿರು ಸಂಪತ್ತು ವರ್ಧನೆಗೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಕೃಷಿ ಪ್ರೋತ್ಸಾಹ ಯೋಜನೆಯಡಿ ಗಿಡ ಬೆಳೆಸುವವರಿಗೆ ಸಹಾಯಧನ ನೀಡಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next