Advertisement
ನಗರದ ಬಹುತೇಕ ಮಾರುಕಟ್ಟೆ, ಹೋಲ್‌ಸೇಲ್ ಹಾಗೂ ರಿಟೈಲ್ ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ, ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟ ಆರಂಭವಾಗಿದೆ. ಮುಖ್ಯವಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಗೊಂಚಲು ಗೊಂಚಲಾಗಿ ಪ್ಲಾಸ್ಟಿಕ್ ಧ್ವಜಗಳನ್ನು ಹಿಡಿದುಕೊಂಡು ಮಾರಾಟ ಮಾಡಲಾರಂಭಿಸಿದ್ದಾರೆ. ಇದಕ್ಕೆ ಆರಂಭದಲ್ಲೇ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಡಿವಾಣ ಹಾಕಬೇಕಾಗಿದೆ.
ಸಂಕೇತವಾಗಿದ್ದ ಈ ಪ್ಲಾಸ್ಟಿಕ್ ಧ್ವಜಗಳು ಸಂಜೆಯಾಗುತ್ತಿದ್ದಂತೆ ರಸ್ತೆ ಬದಿ, ಕಸದ ಬುಟ್ಟಿಗಳಲ್ಲಿ, ಚರಂಡಿಗಳಲ್ಲಿ ಕಾಣುತ್ತವೆ. ಅದರಲ್ಲೂ ನಗರದ ಮಾಣಿಕ್ ಷಾ ಪರೇಡ್ ಸೇರಿದಂತೆ ವಿವಿಧೆಡೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ಆ ಪ್ರದೇಶಗಳ ಸುತ್ತಮುತ್ತ ರಾಶಿಗಟ್ಟಲೆ ಪ್ಲಾಸ್ಟಿಕ್ ಧ್ವಜಗಳು ಬಿದ್ದಿರುತ್ತವೆ. ದಂಡ ಹಾಕಲಾಗುವುದು: ಬಿಬಿಎಂಪಿ ಪ್ಲಾಸ್ಟಿಕ್ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ಲಾಸ್ಟಿಕ್ ಧ್ವಜವೂ ಸೇರಿದೆ. ರಸ್ತೆ ಬದಿ ಹಾಗೂ ಜಂಕ್ಷನ್‌ಗಳಲ್ಲಿ ಮಾರಾಟ ಮಾಡುವವರನ್ನು ಹಿಡಿದು ಅವರ ಮಾಲೀಕರಿಗೆ ದಂಡ ಹಾಕಲಾಗುವುದು. ಅಥವಾ ಆ ವ್ಯಾಪಾರಿಯ ವಹಿ ವಾಟಿನ ಆಧಾರದ ಮೇಲೆ ನೂರು ಅಥವಾ
ಸಾವಿರ ರೂ ಪಾಯಿ ದಂಡ ಹಾಕಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಸಫìರಾಜ್ ಖಾನ್ ತಿಳಿಸಿದ್ದಾರೆ. ರಾಷ್ಟ್ರೀಯ ಹಬ್ಬಗಳು ಹತ್ತಿರ ಬರುತ್ತಿದಂತೆ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಧ್ವಜ ಹಾವಳಿ ಹೆಚ್ಚಾಗುತ್ತದೆ. ಧ್ವಜಕ್ಕೆಂದೇ ಪ್ರತ್ಯೇಕವಾಗಿ ಯಾವ ಕಾನೂನು
ಸಿದ್ಧಪಡಿಸಿಲ್ಲ. ಪ್ಲಾಸ್ಟಿಕ್ ದಾಳಿಯಲ್ಲಿಯೇ ಅದನ್ನು ವಶಪಡಿಸಿಕೊಳ್ಳುತ್ತೇವೆ. ಬೀದಿ ಬದಿಯ ವ್ಯಾಪಾರಿಗಳ ಸಭೆಯಲ್ಲಿ ಧ್ವಜವನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಕೊಂಡುಕೊಳ್ಳದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸದ್ಯದಲ್ಲೇ ಹಾಕಿಕೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ.
Related Articles
ಕೊಳ್ಳುವವರನ್ನು ಎಚ್ಚರಿಸಬೇಕು. ಯಾವುದೇ ಸಮಾರಂಭದಲ್ಲಿ ಬಳಸುತ್ತಿದ್ದರೇ ನೇರವಾಗಿ ವಶಕ್ಕೆ
ಪಡೆಯಬೇಕು. ಸಾರ್ವಜನಿಕರು ಪ್ಲಾಸ್ಟಿಕ್ ಧ್ವಜ ತಿರಸ್ಕರಿಸಬೇಕಿದೆ.
ಯಲ್ಲಪ್ಪ ರೆಡ್ಡಿ, ಪರಿಸರವಾದಿ
Advertisement
10 ರೂ. ಒಂದು ಬಾವುಟ ಮಾರಾಟ ಮಾಡಿದರೆ ನಮಗೆ 5ರೂ. ಲಾಭ ಬರುತ್ತದೆ. ಸಿಗ್ನಲ್‌ಗಳಲ್ಲಿಯೇ ಮಾರಾಟ ಜೋರಿರುತ್ತದೆ. ಈ ಬಾರಿ ಪ್ಲಾಸ್ಟಿಕ್ ಧ್ವಜದ ಜತೆಗೆ
ಪಾಲಿಸ್ಟರ್ ಬಟ್ಟೆಯ ಹಾಗೂ ಲೋಹದ ಚಿಕ್ಕ ಚಿಕ್ಕ ಲಾಂಛನಗಳನ್ನು ಮಾರಾಟ ಮಾಡುತ್ತಿದ್ದೇವೆ.
ಬಸವರಾಜ. ವ್ಯಾಪಾರಿ