Advertisement

ಶಾಲಾ ಮಕ್ಕಳಲ್ಲಿ ಕಂಡು ಬರುತ್ತಿದೆ ಕೋಟ್ಲೆ

01:00 AM Feb 25, 2019 | Harsha Rao |

ಮಣಿಪಾಲ: ಹವಾಮಾನಕ್ಕೆ ಸರಿಯಾಗಿ ಕಾಡುವ ವೈರಲ್‌ ಕಾಯಿಲೆಗಳಾದ ಕೆಪ್ಪಟ್ರಾಯ್‌, ಕೋಟ್ಲೆ ಶಾಲಾ ಮಕ್ಕಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಉಡುಪಿ, ಮಣಿಪಾಲ ಮತ್ತಿತರ ಪ್ರದೇಶಗಳಲ್ಲಿ ಶಾಲಾ ಮಕ್ಕಳಲ್ಲಿ ಕೋಟ್ಲೆ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯ ಕಾಯಿಲೆಯಾಗಿದ್ದರೂ ಮಕ್ಕಳಿಗೆ ಚಿಕಿತ್ಸೆ, ಪೌಷ್ಟಿಕ ಆಹಾರ ನೀಡುವುದರ ಜತೆಗೆ ನೈರ್ಮಲ್ಯ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. 

Advertisement

ತಡೆ ಹೇಗೆ?
ಕೋಟ್ಲೆ ಆದವರ ಉಸಿರಾಟ, ಕೆಮ್ಮು, ಸೀನಿನಿಂದ ವೈರಾಣು ಹರಡಬಹುದಾಗಿದ್ದು, ಈ ಸಂದರ್ಭ ಕೋಟ್ಲೆ ಬಾಧಿತರು ಟವೆಲ್‌ ಅಡ್ಡ ಹಿಡಿಯುವುದು ಉತ್ತಮ. ಜತೆಗೆ ಅಲ್ಲಲ್ಲಿ ಉಗುಳುವುದನ್ನೂ ಮಾಡಬಾರದು.

ಚಿಕಿತ್ಸೆ ಹೇಗೆ?
ಒಂದು ವರ್ಷದೊಳಗಿನ ಮಕ್ಕಳಿಗೆ ಲಸಿಕಾ ಕಾರ್ಯಕ್ರಮದಲ್ಲಿ ಕೋಟ್ಲೆ ಬಾರದಂತೆ ಲಸಿಕೆ ನೀಡಲಾಗುತ್ತದೆ. ಉಳಿದವರಿಗೆ ರೋಗ ಲಕ್ಷಣಗಳಿಗೆ ಆಧರಿತವಾಗಿ ಅಥವಾ ಆ್ಯಂಟಿ ವೈರಲ್‌ ಚಿಕಿತ್ಸೆ ನೀಡಲಾಗುತ್ತದೆ. 

ದೂರವಿರಬೇಕು
ಕೋಟ್ಲೆ ಆದವರು ಕನಿಷ್ಟ 15 ದಿನಗಳ ವರಗೆ ಶಾಲೆಗೆ ಹೋಗಬಾರದು. ಈ ಬಗ್ಗೆ ಹೆತ್ತವರು ಗಂಭೀರವಾಗಿ ಪರಿಗಣಿಸಬೇಕು. ಕೆಮ್ಮು, ಸೀನಿನ ಮೂಲಕ ಕೋಟ್ಲೆ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ. ಕೋಟ್ಲೆ ಆದವರು ಗರ್ಭಿಣಿಯರಿಂದ ದೂರ ಇರಬೇಕು ಮತ್ತು ಸ್ವತಃ ನೈರ್ಮಲ್ಯವನ್ನು ಕಾಯ್ದುಕೊಂಡು ಧಾನ್ಯ ಸೊಪ್ಪು ಸಹಿತ  ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಖಾರ, ಎಣ್ಣೆ,ಮಾಂಸಾಹಾರ  ಕಡಿಮೆ ಮಾಡುವುದು ಉತ್ತಮ. ವಾಸಿ ಆಗುವವರೆಗೆ ಇತರ ಮಕ್ಕಳಿಂದ  ದೂರವಿರುವುದು ಮುಖ್ಯ. 

ಚಿಕಿತ್ಸೆ ಅಗತ್ಯ
ಕೋಟ್ಲೆ ಬೀಳುವ ಲಕ್ಷಣ ಕಂಡು ಬಂದಾಗ ತತ್‌ಕ್ಷಣ ಚಿಕಿತ್ಸೆ ಪಡೆದು ಕೊಳ್ಳಬೇಕು. ಉಸಿರಾಟದಲ್ಲಿ ಸಮಸ್ಯೆಯಾಗುತ್ತಿದ್ದರೆ ವೈದ್ಯರಿಗೆ ವಿಷಯ ತಿಳಿಸಬೇಕು.

Advertisement

ಆ್ಯಂಟಿ ವೈರಲ್‌ ಥೆರಪಿ
ಜ್ವರ ಮತ್ತು ಕೋಟ್ಲೆ ಬೀಳುವ ಲಕ್ಷಣ ಕಂಡ ಕೂಡಲೇ ವೈದ್ಯರನ್ನು ಭೇಟಿಯಾಗಿ ಆ್ಯಂಟಿ ವೈರಲ್‌ ಥೆರಪಿ ಪಡೆಯಬಹುದು. ಇದರಿಂದ ಕೋಟ್ಲೆ ಪ್ರಮಾಣ ಕಡಿಮೆಯಾಗುತ್ತದೆ.

ನೈರ್ಮಲ್ಯ ಕಾಯ್ದುಕೊಳ್ಳಬೇಕು
 ಕೋಟ್ಲೆ ಆದ ಮಕ್ಕಳು ವೈದ್ಯರಿಂದ ಚಿಕಿತ್ಸೆ ಪಡೆದು ನೈರ್ಮಲ್ಯ  ಕಾಯ್ದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಇತರ ಮಕ್ಕಳೊಂದಿಗೆ ಬೆರೆಯುವುದನ್ನು ಸ್ವಲ್ಪ ಸಮಯ ತಡೆಯಬೇಕು.
-ಡಾ| ರೋಹಿಣಿ,  ಡಿಎಚ್‌ಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next