ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದಕೆ.ಆರ್.ಮಾರುಕಟ್ಟೆಯಲ್ಲಿಕಳೆದ ಸೆ.1ರಿಂದ ವಹಿವಾಟು ಆರಂಭವಾಗಿದ್ದು, ಇದೀಗ ಚೇತರಿಕೆ ಕಾಣುತ್ತಿದೆ. ನವರಾತ್ರಿ ಸೇರಿದಂತೆ ಸಾಲು-ಸಾಲು ಹಬ್ಬಗಳುಬರಲಿದ್ದುಹೂವು-ಹಣ್ಣು ವ್ಯಾಪಾರಿಗಳು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.
ಕೆ.ಆರ್.ಮಾರುಟ್ಟೆಯಲ್ಲಿ ಬುಧವಾರ ಜನರು ಸಾಮಾಜಿಕ ಅಂತರವನ್ನು ಮರೆತು ಹೂವುಗಳನ್ನು ಖರೀದಿಸಿದ ದೃಶ್ಯ ಕಂಡು ಬಂತು. ಅತಿವೃಷ್ಟಿ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹೂವು ಮತ್ತು ತರಕಾರಿಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಮಲ್ಲಿಗೆ ಮೊಗ್ಗು ಕೆ.ಜಿ ಗೆ ಸಾವಿರ ರೂ.ಗೆ ಮಾರಾಟವಾಯಿತು. ಹಾಗೆಯೇಕನಕಾಂಬರಹೂ 800 ರೂ., ಮಾರಿಗೋಲ್ಡ್ ಹೂ 220 ರೂ., ಚೆಂಡುಹೂವು 80 ರಿಂದ 40ರೂ., ಕೆಂಪುಗುಲಾಬಿ 160 ರೂ, ಸೇವಂತಿಗೆ 120ರೂ ಹಾಗೂಸುಗಂಧರಾಜ ಕೆ.ಜಿಗೆ 100 ರೂ.ಅಂತೆ ಮಾರಾಟವಾಯಿತು.
ಮಲ್ಲಿಗೆ ಹೂವು ಮಾರಿಗೆ 160 ರೂ, ಕಾಕಡ 80 ರೂ, ಸೇವಂತಿಗೆ 50-60 ರೂ.ಗೆ ಮಾರಾಟವಾಯಿತು. ಈ ವೇಳೆ ಮಾತನಾಡಿದ ಹೂವಿನ ವ್ಯಾಪಾರಿ ಪೆರುಮಾಳ್ ಕಳೆದ ವರ್ಷ ಈ ಸೀಜನ್‌ನಲ್ಲಿ ಉತ್ತಮ ವ್ಯಾಪಾರ ನಡೆದಿತ್ತು. ಆದರೆ ಕೊರೊನಾದ ಹಿನ್ನೆಲೆಯಲ್ಲಿ ಜನರು ಮಾರುಕಟ್ಟೆಗೆ ಬರುತ್ತಿಲ್ಲ. ಶೇ.40- 50 ಮಾತ್ರ ವಹಿವಾಟು ನಡೆಯುತ್ತಿದೆ ಎಂದರು.
ತಮಿಳುನಾಡು ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನಿಂದ ಹೂವುಗಳು ಕೆ.ಆರ್. ಮಾರುಕಟ್ಟೆ ಸೇರಲಿವೆ. ಅತಿವೃಷ್ಟಿ ಹಿನ್ನೆಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹೂವುಗಳು ಬರುತ್ತಿಲ್ಲ ಎಂದು ದಯಾಳನ್ ತಿಳಿಸಿದರು.
ಇನ್ನೂ ಸೇಬು ಮತ್ತು ದಾಳಿಂಬೆ ಹಣ್ಣು ಕೆ.ಜಿಗೆ 80 ರೂ, ಕಿತ್ತಳೆ 40 ರೂ, ಎಲಕ್ಕಿ ಬಾಳೆ ಹಣ್ಣು 40 ರೂ.ಗೆ ಖರೀದಿಯಾಯಿತು. ಹಾಗೆಯೇ ಬೂದ ಕುಂಬಳ ಕಾಯಿ100 ರಿಂದ120 ರೂ.ಗೆ. ಬೀನ್ಸ್ , ಕ್ಯಾರೆಟ್ 40ರೂ ಮತ್ತು ಬೆಂಡೆಕಾಯಿ 30 ರೂ.ಗೆ ಮಾರಾಟವಾಯಿತು.ಮಳೆಹಿನ್ನೆಲೆತರಕಾರಿಯಲ್ಲೂ ಬೆಲೆ ಏರಿಕೆಯಾಗಿದೆ ಎಂದು ಕಲಾಸಿಪಾಳ್ಯದ ತರಕಾರಿ ಮತ್ತು ಹಣ್ಣುಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಹೇಳಿದರು.