ಶಿವಮೊಗ್ಗ : ಸಚಿವ ಸ್ಥಾನಕ್ಕೆ ಇಂದು ಶುಕ್ರವಾರ ರಾಜೀನಾಮೆ ನೀಡಲು ನಿರ್ಧರಿಸಿರುವ ಈಶ್ವರಪ್ಪ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ ಅಲಂಕೃತ ವಿಗ್ರಹದಿಂದ ಹೂವು ಬಲಭಾಗದಲ್ಲಿ ಜಾರಿಬಿದ್ದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಈಶ್ವರಪ್ಪ ಅವರಿಗೆ ಶುಭ ಸೂಚನೆ?
ಶುಭಶ್ರೀ ಸಮುದಾಯ ಭವನ ಉದ್ಘಾಟನೆ ವೇಳೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ವೇಳೆ, ಈಶ್ವರಪ್ಪ ಅವರು ಗಣಪತಿಗೆ ಪೂಜೆ ಸಲ್ಲಿಸಿ, ಕೈ ಮುಗಿಯಿತ್ತಿದ್ದ ಹಾಗೆ ಬಲ ಭಾಗಕ್ಕೆ ಹೂವು ಜಾರಿಬಿದ್ದಿದೆ.
ಆರೋಪಗಳಿಂದ ನೊಂದು ಭಾವುಕರಾಗಿದ್ದ ಈಶ್ವರಪ್ಪ ಅವರು ಪ್ರಸಾದ ರೂಪದಲ್ಲಿ ಹೂವು ಬೀಳುತ್ತಿದ್ದಂತೆ ನಗುವ ಮೂಲಕ ಸಂಭ್ರಮಿಸಿದರು.
ಇದನ್ನೂ ಓದಿ : ಈಶ್ವರಪ್ಪ ಪ್ರಕರಣದಲ್ಲಿ ನಮ್ಮ ಪಕ್ಷದ ಕಳ್ಳನ ಪಾತ್ರವಿದೆ : ಯತ್ನಾಳ್ ಬಾಂಬ್
ಈಶ್ವರಪ್ಪ ಗಣೇಶನಲ್ಲಿ ಬೇಡಿಕೊಂಡಿದ್ದಾದರೂ ಏನು? ಈಶ್ವರಪ್ಪ ಆರೋಪ ಮುಕ್ತರಾಗಿ ಹೊರಗೆ ಬರುತ್ತಾರಾ? ಗಣೇಶನ ಆಶೀರ್ವಾದವೇ?, ಬಲಭಾಗದಲ್ಲಿ ಹೂವು ಬಿದ್ದಿದ್ದರಿಂದ ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂಬ ಮುನ್ಸೂಚನೆಯೇ? ಹೀಗೆ ನಾನಾ ರೀತಿಯ ಚರ್ಚೆಗಳು ಶುರುವಾಗಿವೆ.