ಹಂಪಿ: ಹಂಪಿ ಉತ್ಸವಕ್ಕೆ ಬಂದವರು ಮನಮೋಹಕ ಕಮಲ ಮಹಲ್ ನೋಡಬೇಕಾದರೆ ಈ ಬಾರಿ ಮಾತಂಗ ಪರ್ವತದ ಬುಡಕ್ಕೆ ಬರಬೇಕು, ಇದೇನಪ್ಪ ಕಮಲಮಹಲ್ ಇರುವುದು ಮಹಾನವಮಿ ದಿಬ್ಬದ ಬಳಿ ಅಲ್ವಾ ಎಂದುಕೊಳ್ಳುತ್ತೀರ, ಅದರೇ ಇಲ್ಲಿ ಇರುವುದು ಹೂಗಳಿಂದ ಅರಳಿದ ಕಮಲ ಮಹಲ್!
ಮಾತಂಗ ಪರ್ವತದ ಬಳಿ ಆಯೋಜಿಸಿದ್ದ ಫಲ ಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆಯು ಹೂಗಳಿಂದ ಸಿದ್ದಪಡಿಸಿದ್ದ ಕಮಲ ಮಹಲ್ ನೋಡುಗರ ಕಣ್ಮನ ಸೆಳೆಯಿತು.
ಕಮಲ ಮಹಲ್ ಸಿದ್ಧಪಡಿಸಲು ವಿವಿಧ ಬಣ್ಣಗಳ ಗುಲಾಬಿ ಸೇವಂತಿಗೆ ಹೂ ಸೇರಿದಂತೆ ಸುಮಾರು 15 ಲಕ್ಷಕ್ಕೂ ಅಧಿಕ ಹೂಗಳನ್ನು ಬಳಸಲಾಗಿದೆ. ಬಣ್ಣ ಬಣ್ಣದ ಹೂಗಳ ನಡುವೆ ಅತ್ಯಾಕರ್ಷವಾಗಿ ಗಮನ ಸೆಳೆಯಿತು. ನೋಡುಗರು ಸೇಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನದಲ್ಲಿ ಸಿರಿಧಾನ್ಯದಿಂದ ಮಾಡಿದ ಕನ್ನಡಾಂಬೆ, ವಿಜಯನಗರ ಜಿಲ್ಲೆಯಲ್ಲಿ ಬೆಳೆದ ಸೇಬು, ಕಾಫಿ, ಹಾಗೂ ಪ್ರದರ್ಶನದಲ್ಲಿ ಬೋನ್ಸಾಯ್, ಸೇರಿದಂತೆ ಹಣ್ಣುಗಳಿಂದ ಹರಳಿದ ಮಹನೀಯರ ವಿವಿಧ ಪ್ರಾಣಿ ಪಕ್ಷಿಗಳನ್ನು, ಆಕರ್ಷಕವಾಗಿ ಮೂಡಿಬಂದಿದ್ದು ವಿಶೇಷವಾಗಿತ್ತು.
ವರದಿ: ದಯಾನಂದ ಸಜ್ಜನ್ ಹಂಪಿ