Advertisement

ಹೂವಿನ ಬೆಳೆ: ಸಮೀಕ್ಷೆ ಆಧಾರದಲ್ಲಿ ಪರಿಹಾರ ಪಾವತಿಸಲು ಕ್ರಮ

10:29 PM May 17, 2020 | Sriram |

ತೆಕ್ಕಟ್ಟೆ: ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ ಹೂವಿನ ಬೆಳೆಗಾರರಿಗೆ ಸರಕಾರವು ಗರಿಷ್ಠ 1 ಹೆಕ್ಟೇರಿಗೆ 25,000 ರೂ. ಪರಿಹಾರ ಘೋಷಿಸಿದ್ದು ಸರಕಾರದ ಮಾರ್ಗಸೂಚಿಯಂತೆ 2019-20ನೇ ಸಾಲಿನ ಬೆಳೆ ಸಮೀಕ್ಷೆ ಆಧಾರದಲ್ಲಿ ಪರಿಹಾರ ಪಾವತಿಸಲು ಕ್ರಮ ವಹಿಸಲಾಗುತ್ತಿದೆ.

Advertisement

ರೈತರು ಬೆಳೆದಿರುವ ಬಹುವಾರ್ಷಿಕ ಪುಷ್ಪ ಬೆಳೆ (ಉಡುಪಿ ಮಲ್ಲಿಗೆ) 2019-20ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ವರದಿಯಲ್ಲಿ ನಮೂದಾಗಿರುವ ಬಗ್ಗೆ ಹಾಗೂ ವಾರ್ಷಿಕ ಪುಷ್ಪ ಬೆಳೆ (ಹೆಮ್ಮಾಡಿ ಸೇವಂತಿಗೆ)2019-20ನೇಸಾಲಿನ ಹಿಂಗಾರು ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಪಟ್ಟಿಗಳನ್ನು ಸಂಬಂಧ ಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತ್‌ ಕಚೇರಿ ಹಾಗೂ ತಾಲೂಕು ತೋಟಗಾರಿಕೆ ಕಚೇರಿಯ ನಾಮಫಲಕದಲ್ಲಿ ಪ್ರಕಟಿಸಲಾಗಿದೆ. ಸಮೀಕ್ಷೆಯಲ್ಲಿ ಪುಷ್ಪಬೆಳೆ ದಾಖಲಾಗದ ರೈತರು ಪಹಣಿ, ಆಧಾರ್‌ ಮತ್ತು ಬ್ಯಾಂಕ್‌ಪಾಸ್‌ ಪುಸ್ತಕದ ಪ್ರತಿಯನ್ನು, ಭಾವಚಿತ್ರ ಹಾಗೂ ಮೊಬೈಲ್‌ ಸಂಖ್ಯೆ ವಿವರಗಳನ್ನು ಕುಂದಾಪುರದಲ್ಲಿರುವ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಮೇ.28 ರ ಒಳಗೆ ಸಲ್ಲಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ
ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು- 9900565469.,ಸಹಾಯಕ ತೋಟಗಾರಿಕೆ ಅಧಿಕಾರಿ ಕುಂದಾಪುರ ಹೋಬಳಿ- 9164784180.,ಸಹಾಯಕ ತೋಟಗಾರಿಕೆ ಅಧಿಕಾರಿ ವಂಡ್ಸೆ ಹೋಬಳಿ- 8792644127. ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಬೈಂದೂರು ಹೋಬಳಿ-9481721482 ಅವರನ್ನು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next