Advertisement

ದಕ್ಷಿಣ ಭಾರತದಲ್ಲಿ ಇನ್ನು ಪ್ರವಾಹ ಸರ್ವೇಸಾಮಾನ್ಯ! ಅಧ್ಯಯನ ವರದಿ

07:10 PM Jan 19, 2021 | Team Udayavani |

– ಹವಾಮಾನ ವೈಪರೀತ್ಯದಿಂದಾಗಿ ಭಾರೀ ಮಳೆ ಸಾಧ್ಯತೆ
– ಜೀವವೈವಿಧ್ಯ, ಆಹಾರ ಸುರಕ್ಷತೆ ಮೇಲೆ ದುಷ್ಪರಿಣಾಮ

Advertisement

ನವದೆಹಲಿ: ಭಾರೀ ಮಳೆ, ಎಲ್ಲೆಡೆ ಉಕ್ಕಿಹರಿವ ನದಿಗಳು… ಇದು ದಕ್ಷಿಣ ಭಾರತದಲ್ಲಿ ಇನ್ನು ಸರ್ವೇಸಾಮಾನ್ಯ!
ಹೌದು. ಹವಾಮಾನ ವೈಪರೀತ್ಯದಿಂದಾಗಿ ಮುಂದಿನ ದಶಕಗಳಲ್ಲಿ ದಕ್ಷಿಣ ಭಾರತ ಅತಿಹೆಚ್ಚು ನೆರೆಪ್ರವಾಹಗಳಿಗೆ ಸಾಕ್ಷಿಯಾಗಲಿದೆ ಎಂದು ತಜ್ಞರ ಸಂಶೋಧನೆ ಎಚ್ಚರಿಸಿದೆ. ಇದು 2100ರ ವೇಳೆಗೆ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆ ಮೇಲೆ ಗಂಭೀರ ಪರಿಣಾಮ ಬೀರಲೂಬಹುದು ಎಂದೂ ತಿಳಿಸಿದೆ.

ಹವಾಮಾನ ವೈಪರೀತ್ಯದಿಂದಾಗಿ ಭೂಮಧ್ಯ ರೇಖೆ ಹಾದುಹೋಗುವ ಪೂರ್ವ ಆಫ್ರಿಕ ಮತ್ತು ಹಿಂದೂ ಮಹಾಸಾಗರದಲ್ಲಿ ಮಳೆ ಸುರಿಯುವಿಕೆಯಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಇದರಿಂದ ದಕ್ಷಿಣ ಭಾರತ ಸೇರಿದಂತೆ ಉಷ್ಣವಲಯದ ಹಲವು ಪ್ರದೇಶಗಳಲ್ಲಿ ಮಳೆಯ ಸ್ವರೂಪವನ್ನೇ ಬದಲಾಯಿಸಲಿದ್ದು, “ಮಳೆಯ ಅಸಮ ಹಂಚಿಕೆ’ ಎದುರಾಗಲಿದೆ ಎಂದು ಎಚ್ಚರಿಸಿದೆ.

ಇದನ್ನೂ ಓದಿ:ಕೇಂದ್ರ ಮಾದರಿ ವೇತನ ಪಡೆಯುವುದೇ ಮುಖ್ಯ ಗುರಿ; ಸಿ.ಎಸ್‌. ಷಡಕ್ಷರಿ

ಉಷ್ಣತೆಯೂ ಅಧಿಕ!: “ಜಗತ್ತಿನ ಬೇರೆಡೆಗಿಂತ ಏಷ್ಯಾದಲ್ಲಿ ಅತಿಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದ್ದು, ಉತ್ತರ ಏಷ್ಯಾದ ಹಲವು ಭಾಗಗಳಲ್ಲಿ ಹಿಮಗಡ್ಡೆ- ಹಿಮನದಿಗಳ ಕರಗುವಿಕೆ ಹೆಚ್ಚಾಗಲಿದೆ’ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಲೇಖಕ ಜೇಮ್ಸ್‌ ರ್‍ಯಾಂಡರ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಕ್ಯಾಲಿಫೋರ್ನಿಯಾ ವಿವಿ ತಜ್ಞರ ತಂಡ ನಡೆಸಿದ ಈ ಸಂಶೋಧನೆ ಸಾರಾಂಶವನ್ನು “ನೇಚರ್‌ ಕ್ಲೈಮೇಟ್‌ ಚೇಂಜ್‌’ ಪತ್ರಿಕೆ ಪ್ರಕಟಿಸಿದೆ. ಭಾರತದ 27 ರಾಜ್ಯಗಳ ಹವಾಮಾನ ಮಾದರಿ ಮತ್ತು ಉಷ್ಣವಲಯದ ಮಳೆಪ್ರದೇಶಗಳ ಪ್ರತಿಕ್ರಿಯೆಗಳನ್ನು ತಜ್ಞರು ಅಧ್ಯಯನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next