Advertisement

ಕೃಷ್ಣೆಯಲ್ಲಿ ಪ್ರವಾಹ

11:18 PM Aug 04, 2019 | Lakshmi GovindaRaj |

ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯದಿಂದ 2,49,823 ಕ್ಯೂಸೆಕ್‌ ನೀರನ್ನು 26 ಕ್ರಸ್ಟ್‌ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ನಡುಗಡ್ಡೆಯಾಗುವ ಮುತ್ತೂರ ಗ್ರಾಮದ 31 ಕುಟುಂಬಗಳ ಪೈಕಿ 25 ಕುಟುಂಬ, 233 ಜಾನುವಾರುಗಳ ಪೈಕಿ 104 ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.

Advertisement

129 ಜಾನುವಾರು ಹಾಗೂ 6 ಕುಟುಂಬಗಳ ಸ್ಥಳಾಂತರ ನಡೆದಿದೆ. ಭೀಮಾ ನದಿಗೆ 60 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 8 ಬ್ಯಾರೇಜ್‌ಗಳು ಭರ್ತಿಯಾಗಿ ಪ್ರವಾಹ ಭೀತಿ ಎದುರಾಗಿದೆ. ವಿಜಯಪುರ ಜಿಲ್ಲೆಯ 19 ಹಳ್ಳಿಗಳ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲೂ ಕೃಷ್ಣಾರ್ಭಟ ಜೋರಾಗಿದ್ದು, ಹಲವು ದೇವಸ್ಥಾನಗಳು, ಸೇತುವೆಗಳು ಜಲಾವೃತಗೊಂಡಿವೆ.

3 ಗ್ರಾಮಗಳ ಶಾಲೆಗೆ 3 ದಿನ ರಜೆ: ಘಟಪ್ರಭಾ ನದಿ ನೀರಿನಿಂದ ನಡುಗಡ್ಡೆಯಾಗುವ ಮುಧೋಳ ತಾಲೂಕಿನ ನಂದಗಾಂವ, ಜಮಖಂಡಿ ತಾಲೂಕಿನ ಮುತ್ತೂರ, ತುಬಚಿ ಗ್ರಾಮದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಜು.5ರಿಂದ 7ರವರೆಗೆ ರಜೆ ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next