Advertisement

ನೆರೆ: ಸಾವಿನ ಸಂಖ್ಯೆ 76ಕ್ಕೆ ಏರಿಕೆ

11:27 PM Aug 18, 2019 | Team Udayavani |

ಬೆಂಗಳೂರು: ರಾಜ್ಯದ ಪ್ರವಾಹ ಪರಿಸ್ಥಿತಿಗೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. 10 ಜನ ಕಾಣೆಯಾಗಿದ್ದಾರೆಂದು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿದ್ದು, ಸಂತ್ರಸ್ತರ ನೆರವಿಗೆ 526 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 2.20 ಲಕ್ಷ ಜನರು ಪರಿಹಾರ ಕೇಂದ್ರಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ. 992 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಪ್ರವಾಹದಿಂದಾಗಿ 6.9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, 75,317 ಮನೆಗಳು ಜಖಂಗೊಂಡಿವೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Advertisement

ಕಟ್ಟಡ ಕುಸಿದು ವೃದ್ಧೆ ಸಾವು: ಮಗನ ಮೇಲೆ ಮುನಿಸಿಕೊಂಡು ಮನೆ ತೊರೆದು ಶಿಥಿಲ ಕಟ್ಟಡದಲ್ಲಿ ಆಶ್ರಯ ಪಡೆದಿದ್ದ ವೃದ್ಧೆಯೋ ರ್ವರು ಕಟ್ಟಡ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.ಮೂಡುಬಿದಿರೆ ಸಮೀಪದ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಗೆ ಸಂಬಂಧಿಸಿದ ಹಳೆಯ ಕಟ್ಟಡದಲ್ಲಿ ಅನಧಿಕೃತವಾಗಿ ವಾಸವಿದ್ದ ಮೀನಾಕ್ಷಿ (65) ಮೃತಪಟ್ಟವರು. ಮಗನ ಮನೆಯಿಂದ ಕಾರಣಾಂತರದಿಂದ ಬೇರ್ಪಟ್ಟು ಇಲ್ಲಿ ವಾಸವಾಗಿದ್ದರು. ಈ ಕಟ್ಟಡ ಶಿಥಿಲವಾಗಿದೆ, ಇಲ್ಲಿರುವುದು ಕ್ಷೇಮವಲ್ಲ ಎಂದು ಶಾಲಾ ಸಂಚಾಲಕರು ಮೊದಲೇ ಸೂಚಿಸಿದ್ದರೂ ಆಕೆ ಅಲ್ಲಿಂದ ಹೋಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next