Advertisement

ಪ್ರವಾಹದ ನೀರಿನಲ್ಲಿ ಪಂಪ್ ಸೆಟ್ ತರಲು ಹೋದ ರೈತರು… ನೀರಿಗಿಳಿಯದಂತೆ ಮನವಿ ಮಾಡಿದ ಸಚಿವರು

12:49 PM Jul 27, 2024 | Team Udayavani |

ಮುಧೋಳ : ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ‌ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸುತ್ತಿರುವ ವೇಳೆಯೇ ರೈತರು ಹರಿಯುವ ನದಿಗಿಳಿದು ಪಂಪ್ ಸೆಟ್ ತರಲು ತೆರಳಿದ ಘಟನೆ ಸಮೀಪದ ಮಿರ್ಜಿ‌ ಗ್ರಾಮದಲ್ಲಿ ನಡೆಯಿತು.

Advertisement

ಮಿರ್ಜಿ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಅವಲೋಕಿಸುವ ಸಂದರ್ಭದಲ್ಲಿನ ಸ್ಥಳೀಯ ರೈತರು ನೀರಿನಲ್ಲಿ‌ ಹರಿದುಹೋಗುತ್ತಿದ್ದ ಮೋಟರ್ ಪಂಪ್ ಗಳನ್ನು ತರಲು ಹೊರಟಿದ್ದರು, ಅದನ್ನು ಗಮನಿಸಿದ ಸಚಿವರು ರೈತರಿಗೆ ದಯವಿಟ್ಟು ನದಿಗೆ‌ ಇಳಿಯಬೇಡಿ‌ ಎಂದು‌ ಮನವಿ ಮಾಡಿಕೊಂಡರು. ಜೊತೆಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next