Advertisement
ಪ್ರವಾಹಕ್ಕೆ ಬಲಿಯಾದ ಹತ್ತರ ಬಾಲಕಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನಾಗರ ಮುನ್ನೋಳಿಯಲ್ಲಿ ಹಳ್ಳ ದಾಟಲು ಹೋದ ಹತ್ತು ವರ್ಷದ ಬಾಲಕಿ ನೀರು ಪಾಲಾದ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಹೊಡೆತಕ್ಕೆ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ. ಕುಂದಗೋಳದಲ್ಲಿ ಹಳ್ಳ ದಾಟಲು ಹೋಗಿ ವ್ಯಕ್ತಿಯೊರ್ವ ಮೃತಪಟ್ಟಿದ್ದ ಬಳಿಕ ಬುಧವಾರ ರಾತ್ರಿ ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿ ಮನೆ ಕುಸಿದು ಚೆನ್ನಮ್ಮ ರಾಮಪ್ಪ ವಾಲೀಕಾರ (೬೫) ಎಂಬ ವದ್ದೆ ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ ಧಾರವಾಡ ತಾಲೂಕಿನ ಮುರಕಟ್ಟಿ ಗ್ರಾಮದ ಬಳಿ ಬೇಡ್ತಿ ಹಳ್ಳಕ್ಕೆ ಸಿಲುಕಿ ವಾಹನ ಚಾಲಕ ಮೃತಪಟ್ಟಿದ್ದು,ಗುರುತು ಪತ್ತೆ ಆಗಿಲ್ಲ.