Advertisement

ಅಪಾಯಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರೆ : ಹಂಪಿ ಸ್ಮಾರಕಗಳು ಮುಳುಗಡೆ

01:21 PM Aug 20, 2020 | sudhir |

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ಹಂಪಿ ತುಂಗಭದ್ರಾ ನದಿ
ಅಪಾರಮಟ್ಟ ಮೀರಿ ಹರಿಯುತ್ತಿದ್ದು ನದಿ ಅಂಚಿನಲ್ಲಿರುವ ಸ್ಮಾರಕಗಳು ನೀರಿನಲ್ಲಿ ಮುಳಗಡೆಯಾಗಿವೆ. ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲದ ಹತ್ತಿರ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿತಟದ ವೈದಿಕ ಮಂಟಪ, ಜನಿವಾರ
ಮಂಟಪ, ಪುರಂದರ ಮಂಟಪ, ಕೋಟಿ ಲಿಂಗ ನದಿಯಲ್ಲಿ ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ಹಾಗೂ
ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಸಂಪರ್ಕ ಕಡಿತವಾಗಿದ್ದು, ಪ್ರವಾಸಿಗರು, ಎದುರು ಬಸವಣ್ಣ ಮಂಟದ ಬೆಟ್ಟದ ಕಾಲುದಾರಿ ಮೂಲಕ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ಸೇರಿದಂತೆ ಅಚ್ಯುತ
ದೇವಾಲಯಗಳಿಗೆ ತೆರಳುತ್ತಿದ್ದಾರೆ. ನದಿ ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ದೋಣಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

Advertisement

ವಿಶೇಷ ಪೂಜೆ: ಶ್ರಾವಣಮಾಸ ಅಮಾವಾಸ್ಯ ನಿಮಿತ್ತ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ, ಪಂಪಾದೇವಿ ಹಾಗೂ ಭುವನೇಶ್ವರಿ
ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರಾವಣಮಾಸದ ಕೊನೆ ದಿನವಾದ ಬುಧವಾರ ನೂರಾರು ಭಕ್ತರು ನದಿಯಲ್ಲಿ
ಮಿಂದು ದೇವರ ದರ್ಶನ ಪಡೆದು ಹೂ-ಹಣ್ಣು, ಕಾಯಿ, ಕಾಣಿಕೆ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next