Advertisement

ಫ್ಲಿಪ್‌ಕಾರ್ಟ್‌ಗೆ ದಂಡ

10:37 AM Mar 28, 2017 | Team Udayavani |

ಹೈದರಾಬಾದ್‌: ದೋಷಪೂರಿತ ಮೊಬೈಲ್‌ ಚಾರ್ಜರ್‌ ಮಾರಾಟ ಮಾಡಿದ್ದಲ್ಲದೆ, ಅದನ್ನು ಉಪಯೋಗಿಸಿದ ಗ್ರಾಹಕರೊಬ್ಬರ ಮೊಬೈಲ್‌ ಹಾಳಾದ್ದಕ್ಕಾಗಿ ಇ-ಕಾಮರ್ಸ್‌ ಕಂಪನಿ ಫ್ಲಿಪ್‌ಕಾರ್ಟ್‌ಗೆ 15 ಸಾವಿರ ರೂ.ದಂಡ ವಿಧಿಸಲಾಗಿದೆ. ಹೈದರಾಬಾದ್‌ನ ಜಿಲ್ಲಾ ಕೋರ್ಟು ಈ ತೀರ್ಪು ನೀಡಿದೆ. ಡಾ.ಅಹ್ಮದ್‌ ಅಕ್‌ ಇರ್ಫಾನಿ  ಕಳೆದ ವರ್ಷ 259 ರೂ. ತೆತ್ತು ಫೋನ್‌ ಚಾರ್ಜರ್‌ ಖರೀದಿಸಿದ್ದರು. ಅದನ್ನು ಚಾರ್ಜ್‌ಗೆ ಹಾಕುತ್ತಿದ್ದಂತೆ ಹತ್ತೇ ನಿಮಿಷದಲ್ಲಿ ಫೋನ್‌ ಕೆಲಸ ಮಾಡದಂತಾಗಿತ್ತು. ಈ ಬಗ್ಗೆ ಫ್ಲಿಪ್‌ಕಾರ್ಟ್‌ಗೆ ದೂರು ನೀಡಿದ ವೇಳೆ ಅವರು ಫೋನ್‌ಗೆ ಪರಿಹಾರ ನೀಡಲು ನಿರಾಕರಿಸಿದ್ದು, ವಿದ್ಯುತ್‌ ಹೆಚ್ಚು ಪೂರೈಕೆಯಾದ್ದರಿಂದ ಹೀಗಾಗಿದೆ ಎಂದಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next