Advertisement
ವಿಮಾನದಲ್ಲಿ ಶೌಚಾಲಯಕ್ಕೆ ತೆರಳುವ ಭಾರತೀಯರಿಗೆ ಶೌಚಾಲಯವನ್ನು ಹೇಗೆ ಬಳಸಬೇಕೆಂದೇ ಗೊತ್ತಿಲ್ಲವಂತೆ. ಅವರು ಅಲ್ಲಿನ ವ್ಯವಸ್ಥೆಯನ್ನು ಕೆಟ್ಟದ್ದಾಗಿ ಬಳಸುವುದರಿಂದ ಸಮಸ್ಯೆಯಾಗುತ್ತದಂತೆ. ಕೆಲವು ಪ್ರಯಾಣಿಕರು ಶೌಚಾಲಯದ ಕಮೋಡ್‌ಗೆ ಬಾಟಲಿ, ಟಿಶ್ಯೂ ಪೇಪರ್, ಇತರ ಬೇಡದ ವಸ್ತುಗಳನ್ನು ಹಾಕುತ್ತಾರೆ. ಇದರಿಂದ ಈಗಿನ ನಿರ್ವಾತ ತಾಂತ್ರಿಕತೆ ಹೊಂದಿದ ಅತ್ಯಾಧುನಿಕ ಶೌಚಾಲಯಗಳು ಕೂಡ ಬ್ಲಾಕ್ ಆಗುತ್ತವಂತೆ.ಅದನ್ನು ಸರಿಪಡಿಸದೇ ವಿಮಾನ ಪ್ರಯಾಣ ಮಾಡುವಂತೆ ಇರುವುದಿಲ್ಲ. ಇದನ್ನು ಸರಿಪಡಿಸುವ ಸಮಯದಲ್ಲಿ ವಿಮಾನ ತಡವಾಗುತ್ತದೆ ಎಂದು ಹೇಳಲಾಗಿದೆ. ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಶೌಚಾಲಯ ಬ್ಲಾಕ್ ಆದ ಬಗ್ಗೆ ತಿಂಗಳಿಗೆ ಸಾಮಾನ್ಯ 30ರಿಂದ 60 ದೂರುಗಳು ದಾಖಲಾಗುತ್ತವೆ. ಕಳೆದ ಶನಿವಾರ ದೆಹಲಿ-ಚಿಕಾಗೋ ವಿಮಾನ ವಿಳಂಬಕ್ಕೂ ಇದೇ ಕಾರಣವಾಗಿತ್ತು. 2016ರಲ್ಲಿ ಜೂ. 5ರಿಂದ ಆ.23ರ ವರೆಗಿನ ಅವಧಿಯಲ್ಲಿ 14 ಅಂತಾರಾಷ್ಟ್ರೀಯ ವಿಮಾನಗಳು ಟಾಯ್ಲೆಟ್ ಬ್ಲಾಕ್‌ನಿಂದಾಗಿಯೇ ವಿಳಂಬವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. Advertisement
ಫ್ಲೈಟ್‌ಗೆ ಶೌಚಾಲಯ “ಬ್ಲಾಕ್’!
11:04 AM Mar 16, 2017 | |
Advertisement
Udayavani is now on Telegram. Click here to join our channel and stay updated with the latest news.