Advertisement

ವಿಮಾನ ವಿಳಂಬ: ಸಚಿವರಿಗೆ ವೈದ್ಯೆ ತರಾಟೆ

06:20 AM Nov 23, 2017 | Team Udayavani |

ಹೊಸದಿಲ್ಲಿ: ವಿವಿಐಪಿಗಳಿಂದಾಗಿ ತಾವು ಪ್ರಯಾಣಿಸ ಬೇಕಿದ್ದ ವಿಮಾನ 2 ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದಕ್ಕೆ ಮಹಿಳೆಯೊಬ್ಬರು ಕೇಂದ್ರ ಸಚಿವ ಕೆ.ಜೆ.ಅಲ್ಫೋನ್ಸ್ರನ್ನು ತರಾಟೆಗೆ ತೆಗೆದುಕೊಂಡ ಘಟನೆ ವೈರಲ್‌ ಆಗಿದೆ. ಆದರೆ, ಸಚಿವ ಅಲ್ಫೋನ್ಸ್ರವರು ಸಾವಧಾನದಿಂದ ವರ್ತಿಸಿದ್ದು, “ಆಕೆಯ ಬೇಗುದಿ ನನಗೆ ಅರ್ಥವಾಗುತ್ತದೆ’ ಎಂದಿದ್ದಾರೆ.

Advertisement

ಇಂಫಾಲ್‌ಗೆ ರಾಷ್ಟ್ರಪತಿ ಕೋವಿಂದ್‌ ಆಗಮನ ಹಿನ್ನೆಲೆಯಲ್ಲಿ ಇತರ ವಿಮಾನಗಳ ಸಂಚಾರವನ್ನು ವಿಳಂಬ ಮಾಡಲಾಯಿತು. ಇದರಿಂದ ಆಕ್ರೋಶಗೊಂಡ ನಿರಾಳಾ ಸಿಂಗ್‌ ಎಂಬ ವೈದ್ಯೆ, ದಿಲ್ಲಿಗೆ ಹೊರಟು ನಿಂತಿದ್ದ ಸಚಿವ ಅಲ್ಫೋನ್ಸ್ ರನ್ನು ತರಾಟೆಗೆ ತೆಗೆದುಕೊಂಡರು. “ನನ್ನ ಸಹೋದರ ನಿಧನ ಹೊಂದಿದ್ದು, ಅಂತ್ಯಕ್ರಿಯೆ ಇನ್ನೂ ನಡೆದಿಲ್ಲ. ನನಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಮೃತದೇಹವನ್ನು ತುಂಬಾ ಹೊತ್ತು ಇಡಲಾಗದು. ವಿಐಪಿಗಳಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಆಕ್ರೋಶಭರಿತರಾಗಿ ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next