Advertisement

“ಸಿಂಧುತ್ವ” ಸಮಸ್ಯೆ ಬಗೆಹರಿಸಿ

01:26 PM Jan 13, 2022 | Team Udayavani |

ಬೀದರ: ಗೊಂಡ ಮತ್ತು ಟೋಕರಿ ಕೋಳಿ ಸಮಾಜದವರಿಗೆ ಸಿಂಧುತ್ವ ಪ್ರಮಾಣ ಪತ್ರ ವಿತರಣೆಯಲ್ಲಿನ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಮನವಿ ಮಾಡಿದೆ.

Advertisement

ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ ನೇತೃತ್ವದಲ್ಲಿ ಪ್ರಮುಖರು ನಗರದಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಸುಮಾರು 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗೊಂಡ ಮತ್ತು ಟೋಕರಿ ಕೋಳಿ ಸಿಂಧುತ್ವ ಪ್ರಮಾಣ ಪತ್ರದಿಂದ ವಂಚಿತರಾಗಿದ್ದು, ಅನ್ಯಾಯ ಆಗುತ್ತಿದೆ. ಹೀಗಾಗಿ ಕೂಡಲೇ ಸಿಂಧುತ್ವ ಪ್ರಮಾಣ ಪತ್ರ ಕೊಡಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಅನಿಲ ಚಿಲ್ಲರ್ಗಿ, ಮಲ್ಲಿಕಾರ್ಜುನ ವಗ್ಗೆ, ವೈಜಿನಾಥ ಹಲಬರ್ಗಾ, ನಾಗನಾಥ ಉಚ್ಚಾ, ನಾಗಶೆಟ್ಟಿ ಮರಖಲ್‌, ವಿಜಯಕುಮಾರ ಪೀರಗೊಂಡ, ವಿಠಲ್‌ ಹಳೆಂಬುರೆ, ಪಂಡರಿ ಜಮಾದಾರ, ಶಿವಕುಮಾರ ಬಾಳೂರ, ಬಸವರಾಜ ಕುತ್ತಾಬಾದ, ವೀರೇಶ ಜಾಂಪಡೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next