Advertisement
ಗ್ರಾಮದ 33/11 ಕೆ.ವಿ. ವಿದ್ಯುತ್ ಪರಿವರ್ತನೆ ಉಪಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆಯುವ ಬೆಳೆಗೆ ಸರಿಯಾದ ವಿದ್ಯುತ್ ಇಲ್ಲದ ಕಾರಣ ಸಮಸ್ಯೆ ಆಗುತ್ತಿತ್ತು. ಹೀಗಾಗಿ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಹಿನ್ನೆಲೆಯಲ್ಲಿಈ ಭಾಗದಲ್ಲಿ ಹೊಸ ವಿದ್ಯುತ್ ಪರಿವರ್ತನೆ ಕೇಂದ್ರ ಮಂಜೂರು ಮಾಡಲಾಗಿದೆ ಎಂದರು.
Related Articles
Advertisement
ಇಳಕಲ್ಲ ತಾಪಂ ಅಧ್ಯಕ್ಷೆ ಶಾರದಾ ಗೋಡಿ, ಮಹಾಂತೇಶ ಪಾಟೀಲ,ಕಂದಗಲ್ಲ ಗ್ರಾಪಂ. ಅಧ್ಯಕ್ಷೆ ಶರಣಮ್ಮ ಭಜಂತ್ರಿ, ಉಪಾದ್ಯಕ್ಷ ಅಮಾತೆಪ್ಪ ಯರದಾಳ, ಗುತ್ತಿಗೆದಾರಾದಪ್ರಕಾಶ ಗೋಲಪ್ಪನವರ, ಕಂದಗಲ್ಲ,ಹಿರೇಓತಗೇರಿ, ನಂವಾಡಗಿ,ಹಿರೇಶಿಂಗನಗುತ್ತಿ, ಗ್ರಾಮಗಳ ರೈತರು, ಹೆಸ್ಕಾಂ ಅಧಿಕಾರಿಗಳು ಪಾಲ್ಗೊಂಡಿದ್ದರು.
ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ :
ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನ ರಥೋತ್ಸವವು ಏ.13ರಂದು ಜರುಗಲಿದ್ದು. ಸಾರ್ವಜನಿಕರ ಭಕ್ತಾದಿಗಳ ಅನುಕೂಲಕ್ಕಾಗಿ ವಾಯುವ್ಯಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದಿಂದ ಏ. 14ರವರೆಗೆಜಮಖಂಡಿ, ಮುಧೋಳ, ಬೀಳಗಿ, ಬಾಗಲಕೋಟೆ, ಬಾದಾಮಿ, ಹುನಗುಂದಮತ್ತು ಇಳಕಲ್ಲ ಘಟಕಗಳಿಂದ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
45 ರಿಂದ 55 ಜನ ಪ್ರಯಾಣಿಕರು ಲಭ್ಯವಿದ್ದಲ್ಲಿ ದಾರಿ ಮಧ್ಯ ಬರುವ ಯಾತ್ರಾ ಸ್ಥಳಗಳ ದರ್ಶನ ಮತ್ತು ಉಚಿತ ಅನ್ನ ಪ್ರಸಾದ ಸ್ಥಳಗಳಲ್ಲಿ ಬಸ್‌ನಿಲ್ಲಿಸಲಾಗುವುದು. ಕೇಂದ್ರ ಸ್ಥಾನ ಅಷ್ಟೆ ಅಲ್ಲದೆ ಪ್ರಯಾಣಿಕರು ಇಚ್ಚಿಸಿದ್ದಲ್ಲಿ ಅವರ ಗ್ರಾಮಗಳಿಂದ ನೇರವಾಗಿ ಶ್ರೀಶೈಲಕ್ಕೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಯಾಣಿಕರು
ಮಂತ್ರಾಲಯ ಹಾಗೂ ಮಹಾನಂದಿ ದರ್ಶನ ಮಾಡಲು ಇಚ್ಚಿಸಿದ್ದಲ್ಲಿ ಪ್ರಯಾಣ ದರವನ್ನು ಪಾವತಿಸಿದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಭಾಗೀಯ ಸಾರಿಗೆ ಅಧಿಕಾರಿ ಬಾಗಲಕೋಟೆ 7760991752 , ಘಟಕ ವ್ಯವಸ್ಥಾಪಕರು ಬಾಗಲಕೋಟೆ 7760991775, ಜಮಖಂಡಿ 7760991778, ಬಾದಾಮಿ 7760991776, ಇಳಕಲ್ 7760991777, ಮುಧೋಳ 7760991779, ಬೀಳಗಿ 7760991780, ಹುನಗುಂದ ಮೊ: 9606068611 ಸಂಪರ್ಕಿಸಬಹುದು. ಬಸ್‌ನಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ವಾ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.