Advertisement

ಸರ್ಜಿಕಲ್‌ ದಾಳಿಗೆ ಐದು ವರ್ಷ

01:11 AM Sep 30, 2021 | Team Udayavani |

ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ 2016 ಸೆ.18ರಂದು ಪಾಕ್‌ನ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಉಗ್ರರು ದಾಳಿ ನಡೆಸಿದ್ದರು. ಆಗ, 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರವಾಗಿ 2016ರ ಸೆ.29ರಂದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತ ಸರ್ಜಿಕಲ್‌ ದಾಳಿ ನಡೆಸಿತ್ತು. ಆ ವೀರೋಚಿತ ಕಾರ್ಯಾಚರಣೆಗೆ ಬುಧವಾರ 5 ವರ್ಷಗಳು ಪೂರ್ತಿಯಾಗಿವೆ.

Advertisement

ಹೇಗಾಗಿತ್ತು ಕಾರ್ಯಾಚರಣೆ?
-ಭದ್ರತೆ ಮತ್ತು ಗೌಪ್ಯ ಕಾರಣಗಳಿಗಾಗಿ ಕಾರ್ಯಾಚರಣೆಯ ದಿನಾಂಕ ಬದಲಾವಣೆ ಮಾಡಲಾಗಿತ್ತು. ಈ ಬಗ್ಗೆ ಪ್ರಧಾನಿ ಮೋದಿಯವರೇ ಮಾಹಿತಿ ನೀಡಿದ್ದರು. ದಾಳಿಯಿಂದ ಫ‌ಲ ಸಿಗುತ್ತದೋ, ಇಲ್ಲವೋ ಎನ್ನುವುದು ಪ್ರಶ್ನೆಯಲ್ಲ. ಸೂರ್ಯೋದಯದ ಮೊದಲು ಸುರಕ್ಷಿತರಾಗಿ ಎಂದು ಯೋಧರಿಗೆ ಸೂಚಿಸಿದ್ದರು.
-ಕೇಂದ್ರ ಸರಕಾರ ಮತ್ತು ಸೇನೆ ಕಾರ್ಯಾಚರಣೆ ನಡೆಸಿದ್ದ ಯೋಧರ ತಂಡಕ್ಕೆ ಉಗ್ರರನ್ನು ಶಿಕ್ಷಿಸುವ ಕ್ರಮ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿತ್ತು.

ಇದನ್ನೂ ಓದಿ:ಸ್ವಾತಂತ್ರ್ಯ ಹೋರಾಟಕ್ಕೂ ಸಿದ್ದರಾಮಯ್ಯರಿಗೂ ಏನು ಸಂಬಂಧ: ಆರಗ ಪ್ರಶ್ನೆ

ಕಾರ್ಯಾಚರಣೆಯಿಂದ
ಏನಾಯಿತು?
ಪಿಒಕೆಯಲ್ಲಿ ನಮ್ಮ ದೇಶದ ಯೋಧರು 35-40 ಉಗ್ರರನ್ನು ಕೊಂದು ಹಾಕಿದ್ದರು.

ಯೋಜನೆ, ಸಿದ್ಧತೆ ಹೇಗಿತ್ತು?
-2016ರ ಸೆ.27ರಂದು ಎಲ್‌ಒಸಿ ಸಮೀಪ ಇರುವ ಗ್ರಾಮಗಳ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲಾಗಿತ್ತು.
-ಸೆ.24ರಂದೇ ಸರ್ಜಿಕಲ್‌ ದಾಳಿ ನಡೆಸಲು ಯೋಧರ ಆಯ್ಕೆ ನಡೆಸಿ, ತಂಡ ಸಿದ್ಧಗೊಳಿಸಲಾರಂಭಿಸಿತ್ತು. ನೈಟ್‌ ವಿಷನ್‌ ಡಿವೈಸ್‌, ಎ.ಕೆ.47 ರೈಫ‌ಲ್‌, ಟವೋರ್‌ 21 ಗನ್‌ಗಳಿಂದ ಪ್ರತೀಕಾರಕ್ಕೆ ಸಿದ್ಧವಾಗಿತ್ತು.
-ಇದರ ಜತೆಗೆ ರಾಕೆಟ್‌ ಪ್ರೊಪೆಲ್ಡ್‌ ಗ್ರೆನೇಡ್‌ಗಳು, ಭಾರೀ ಪ್ರಮಾಣದ ಸ್ಫೋಟಕಗಳಿದ್ದವು.
-ಅದರಲ್ಲಿ ಭಾರೀ ಯಶಸ್ಸು ಉಂಟಾಗಿತ್ತು. ಹೀಗಾಗಿ, ಪ್ರತೀ ವರ್ಷದ ಸೆ.29ನ್ನು “ಸರ್ಜಿಕಲ್‌ ದಾಳಿಯ ದಿನ’ ಎಂದು ಆಚರಿಸಲಾಗುತ್ತದೆ.
-2018ರಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಸಮ್ಮಾನ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next