Advertisement

ಕೊರೊನೋತ್ತರ ಬದುಕಿಗೆ ಪಂಚ ವಿತ್ತ ಸೂತ್ರಗಳು!

12:53 AM Jan 03, 2021 | Team Udayavani |

ಇಂದು ಕೊರೊನಾ ಎನ್ನುವ ಕಣ್ಣಿಗೆ ಕಾಣದ ಅತೀ ಸೂಕ್ಷ್ಮ ವೈರಾಣು ಜಗತ್ತಿನ ಆರ್ಥಿಕತೆಯನ್ನು ಬುಡಮೇಲು ಮಾಡಿಬಿಟ್ಟಿದೆ. ದೇಶಗಳ ಮತ್ತು ಅತೀ ದೊಡ್ಡ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿರುವ ಈ ಸಮಯದಲ್ಲಿ ಕುಟುಂಬದ ಕಥೆಗಳೂ ಅಷ್ಟೇ ಚಿಂತಾಜನಕವಾಗಿವೆ. ಆದಾಯದ ಮೂಲಕ್ಕೆ ಕೊಡಲಿಪೆಟ್ಟು ಬಿದ್ದಿದೆ. ಕೆಲವು ಮನೆಗಳಲ್ಲಿ ಆದಾಯ ಅರ್ಧಕ್ಕೆ ಇಳಿದಿದೆ.
ಯೂರೋಪ್‌ ಮತ್ತಿತರ ಮುಂದುವರಿದ ದೇಶಗಳಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದ ಇನ್ನೂ ಹೊರಬಂದಿಲ್ಲ. ಆದರೆ ಭಾರತದ ಆರ್ಥಿಕತೆ ಅತ್ಯಂತ ತ್ವರಿತಗತಿಯಲ್ಲಿ ಮೇಲ್ಮುಖವಾಗಿ ಸಾಗುತ್ತಿದೆ. ಕೊರೊನಾ ನಮೆಲ್ಲರಿಗೂ ಆರ್ಥಿಕ ಶಿಸ್ತು ಕಲಿಯಲು ನೀಡಿರುವ ಎಚ್ಚರಿಕೆ. ಕೊರೊನೋತ್ತರದಲ್ಲಿ ಪಂಚ ವಿತ್ತ ಸೂತ್ರಗಳನ್ನು ಪಾಲಿಸಿದರೆ, ಅನಿಶ್ಚಿತ ಜಗತ್ತಿನಲ್ಲಿ ಒಂದಷ್ಟು ಆರ್ಥಿಕ ದೃಢತೆ ನಮ್ಮದಾಗುತ್ತದೆ.

Advertisement

1 ತುರ್ತು ನಿಧಿ ಅಥವಾ ಆಪತ್ಕಾಲಕ್ಕೆ ಎಂದು ಪ್ರತೀ ತಿಂಗಳು ಒಂದಷ್ಟು ಹಣವನ್ನು ತೆಗೆದಿರಿಸಬೇಕು. ಎಷ್ಟು ಹಣವನ್ನು ಹೀಗೆ “ಎಮರ್ಜೆನ್ಸಿ ಫ‌ಂಡ್‌’ ಆಗಿ ತೆಗೆದಿರಿಸಬೇಕು ಎನ್ನುವುದು ಆಯಾ ಕುಟುಂಬದ ಜೀವನಶೈಲಿಯನ್ನು ಅವಲಂಬಿಸುತ್ತದೆ.

2 ಅನಾವಶ್ಯಕ ಖರ್ಚಿಗೆ ಬೇಕು ಬ್ರೇಕ್‌. ಕೊರೊನಾಗಿಂತ ಮುಂಚೆ ಸಾಮಾನ್ಯ ಮಧ್ಯಮವರ್ಗ ಖರ್ಚಿಗೆ ಹೆದರಿದ ಉದಾಹರಣೆ ಇರಲಿಲ್ಲ. ನಾಳಿನ ದುಡ್ಡನ್ನು ಇವತ್ತು ಖರ್ಚು ಮಾಡುವ ಕೆಟ್ಟ ಚಾಳಿಗೆ ಜನತೆ ಬಿದ್ದಿತ್ತು. ಇದೀಗ ಬೇಡದ ಖರ್ಚುಗಳಿಗೆ ಬ್ರೇಕ್‌ ಹಾಕಲೇಬೇಕು. ನೆನಪಿರಲಿ… ಇದು ಜಗತ್ತಿನಲ್ಲಿ ಮುಂಬರುವ ಅನಿಶ್ಚಿತತೆಯ ಆರಂಭವಷ್ಟೇ!

3 ಆದಾಯ ಕುಸಿದಿದ್ದರೂ ಉಳಿಕೆಯ ಬಗ್ಗೆ ಅಜಾಗೂರಕತೆ ಬೇಡ. ಇವತ್ತು ಉಳಿಕೆ ಏಕೆ ಮಾಡಬೇಕು ಎನ್ನುವ ಪ್ರಶ್ನೆ ಕೇಳುವ ಮಟ್ಟಕ್ಕೆ ಉಳಿತಾಯದ ಮೇಲಿನ ಬಡ್ಡಿ ದರ ಕುಸಿದಿದೆ. ಆದರೂ ಉಳಿಕೆಯ ಮಹಾಮಂತ್ರ ಮರೆಯುವುದು ಬೇಡ.

4 ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ಇಂದಿನ ದಿನದಲ್ಲಿ ಯಕ್ಷಪ್ರಶ್ನೆಯಾಗಿದೆ. ಷೇರು ಮಾರುಕಟ್ಟೆಯನ್ನು ಪೂರ್ಣವಾಗಿ ತ್ಯಜಿಸಿ ಇಂದು ಬದುಕಲು ಸಾಧ್ಯವಿಲ್ಲ. ಹೀಗಾಗಿ ಷೇರು ಮಾರುಕಟ್ಟೆಯ ಮೇಲಿನ ಒಂದಷ್ಟು ಜ್ಞಾನ ನಮ್ಮದಾಗಿರಲಿ.

Advertisement

5 ತೀರಾ ಆವಶ್ಯಕವಲ್ಲದೆ ಸಾಲ ಮಾಡುವುದು, ಸಾಲ ಕೊಡುವುದು- ಇವೆರಡೂ ಈ ಕಾಲದಲ್ಲಿ ಒಳ್ಳೆಯದಲ್ಲ. ಕೊರೊನೋತ್ತರ ಯುಗದಲ್ಲಿ ಸಾಲವಿಲ್ಲದವನೇ ಶ್ರೀಮಂತ! ಆದಷ್ಟು ಸರಳ ಜೀವನ ರೂಢಿಸಿಕೊಳ್ಳುವುದು ಉತ್ತಮ.

– ರಂಗಸ್ವಾಮಿ ಮೂಕನಹಳ್ಳಿ , ಆರ್ಥಿಕ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next