Advertisement
ಹರಿಣಗಳ ತಂಡದ ಪ್ರಮುಖ ವೇಗದ ಬೌಲರ್ ಗಳಾದ ಕಗಿಸೋ ರಬಾಡ, ಲುಂಗಿ ಎನ್ ಗಿಡಿ ಮತ್ತು ಮಾಕ್ರೋ ಜೆನ್ಸನ್ ಗೆ ಟೆಸ್ಟ್ ತಂಡದಲ್ಲಿ ಜಾಗ ನೀಡಲಾಗಿಲ್ಲ. ಐಪಿಎಲ್ ನಲ್ಲಿ ಆಡುವ ಏಡನ್ ಮಾಕ್ರಮ್ ಮತ್ತು ರಸ್ಸಿ ವ್ಯಾನ್ ಡರ್ ಡ್ಯುಸನ್ ಕೂಡಾ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ.
Related Articles
Advertisement
ಇದೇ ವೇಳೆ ವೇಗದ ಬೌಲರ್ ಆನ್ರಿಚ್ ನೋರ್ಜೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ನೋರ್ಜೆ ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗರ ಅಸೋಸಿಯೇಷನ್ ನೊಂದಿಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಪ್ರಸ್ತುತ ಒಪ್ಪಂದದ ಪ್ರಕಾರ, ಐಪಿಎಲ್ ನಲ್ಲಿ ಭಾಗವಹಿಸುವ ಅವಕಾಶವನ್ನು ಮಂಡಳಿಯು ನಿರಾಕರಿಸುವಂತಿಲ್ಲ. ಯಾಕೆಂದರೆ ಎರಡೂ ಸಂಸ್ಥೆಗಳು ಆಟಗಾರರ ಜೀವನೋಪಾಯ ಮತ್ತು ಅವಕಾಶಗಳನ್ನು ಮತ್ತು ರಾಷ್ಟ್ರೀಯ ತಂಡಕ್ಕೆ ಅವರ ಕರ್ತವ್ಯಗಳನ್ನು ಸಮತೋಲನಗೊಳಿಸುವ ಕೆಲಸ ಮಾಡುತ್ತವೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಮಾರ್ಚ್ 31ರಿಂದ ಡರ್ಬನ್ ನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಎಪ್ರಿಲ್ 7ರಂದು ಪೋರ್ಟ್ ಎಲಿಜಬೆತ್ ನಲ್ಲಿ ಆರಂಭವಾಗಲಿದೆ. ಐಪಿಎಲ್ ಕೂಟವು ಮಾರ್ಚ್ 26ರಿಂದ ಆರಂಭವಾಗಲಿದೆ.
ದ.ಆಫ್ರಿಕಾ ತಂಡ: ಡೀನ್ ಎಲ್ಗರ್ (ನಾಯಕ), ಟೆಂಬಾ ಬವುಮಾ (ಉಪನಾಯಕ), ಡೇರಿನ್ ಡುಪಾವಿಲ್ಲನ್, ಸರೆಲ್ ಎರ್ವೀ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ವಿಯಾನ್ ಮುಲ್ಡರ್, ಡುವಾನ್ ಒಲಿವಿಯರ್, ಕೀಗನ್ ಪೀಟರ್ಸನ್, ರಿಯಾನ್ ರಿಕೆಲ್ಟನ್, ಲುಥೋ ಸಿಪಾಮ್ಲಾ, ಗ್ಲೆಂಟನ್ ಸ್ಟೌರ್ಮನ್, ಕೈಲ್ ವೆರೆನ್ (ವಿ.ಕೀಪರ್), ಲಿಜಾದ್ ವಿಲಿಯಮ್ಸ್, ಖಯಾ ಝೊಂಡೋ.