Advertisement

ಹಾಸನದಲ್ಲಿ ಮತ್ತೆ 131 ಜನರಿಗೆ ಸೋಂಕು ದೃಢ; ಐವರು ಸೋಂಕಿತರು ಸಾವು

04:45 PM Aug 03, 2020 | keerthan |

ಹಾಸನ: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು ಜಿಲ್ಲೆಯಲ್ಲಿ ಐವರು ಸೋಂಕಿತರು ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ.

Advertisement

ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 131 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 2548 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 1057 ಮಂದಿ  ಸೋಂಕಿತರು ಗುಣಮುಖರಾಗಿದ್ದು 1421 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ರವಿವಾರ ಇಬ್ಬರು ಸೋಂಕಿತರ ಸಾವು ಕಂಡಿದ್ದ ಜಿಲ್ಲೆಯಲ್ಲಿ ಇಂದು ಐವರು ಸೋಂಕಿತರು ಮೃತಪಟ್ಟಿದ್ದಾರೆ.  ಜಿಲ್ಲೆಯ ಸೋಂಕಿತರ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಸಂಖ್ಯೆಯು 70ಕ್ಕೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next