Advertisement

ರಾಜ್ಯದಲ್ಲಿ ಐದು ಹೊಸ ಸೋಂಕು ಪ್ರಕರಣಗಳು ದೃಢ: 282 ಜನರು ಗುಣಮುಖರಾಗಿ ಬಿಡುಗಡೆ

08:23 AM May 04, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಇಂದು ಐದು ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ಈ ಐದು ಪ್ರಕರಣಗಳು ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ದೃಢವಾಗಿದೆ.

Advertisement

ಕಲಬುರಗಿ ಜಿಲ್ಲೆಯಲ್ಲಿ ಮೂರು ಸೋಂಕು ಪ್ರಕರಣಗಳು ದೃಢವಾಗಿದ್ದರೆ, ಎರಡು ಕೋವಿಡ್-19 ಸೋಂಕು ಪ್ರಕರಣಗಳು ಬಾಗಲಕೋಟೆ ಜಿಲ್ಲೆಯ ಮುಧೋಲ್ ನಲ್ಲಿ ದೃಢವಾಗಿದೆ.

ಸೋಂಕಿತ ಸಂಖ್ಯೆ 532ರ ಸಂಪರ್ಕದಿಂದ ಕಲಬುರಗಿಯ ಇಬ್ಬರಿಗೆ ಸೋಂಕು ತಾಗಿದೆ. 13 ವರ್ಷದ ಬಾಲಕಿ ಮತ್ತು 54 ವರ್ಷ ಪ್ರಾಯದ ಪುರುಷನಿಗೆ ಸೋಂಕು ತಾಗಿದೆ. ಮತ್ತೋರ್ವ 41 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟದ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತ ಸಂಖ್ಯೆ 380ರ ಸಂಪರ್ಕದಿಂದ ಬಾಗಲಕೋಟೆಯ ಮುಧೋಲ್ ನ ಇಬ್ಬರಿಗೆ ಸೋಂಕು ತಾಗಿದೆ. 68 ವರ್ಷದ ಗಂಡು ಮತ್ತು 60 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 606 ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 25 ಪ್ರಕರಣಗಳು ಮರಣ ಹೊಂದಿದ್ದು, 382 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next