Advertisement

ಉ.ಪ್ರ.ದಲ್ಲಿ ಕಾರು-ಟ್ರಕ್‌ ಢಿಕ್ಕಿ: ಮಹಿಳೆ, ಮಗು ಸಹಿತ ಐವರ ಸಾವು

11:18 AM Aug 09, 2017 | Team Udayavani |

ಲಖೀಂಪುರ, ಖೇರಿ, ಉತ್ತರ ಪ್ರದೇಶ : ಇಲ್ಲಿನ ಮೊಹಮ್ಮದೀ ಶಹಜಹಾನ್‌ ಪುರ ರಸ್ತೆಯಲ್ಲಿ  ನಿನ್ನೆ ಮಂಗಳವಾರ ತಡ ರಾತ್ರಿ ಟ್ರಕ್‌ ಒಂದು ಎಸ್‌ಯುವಿ ಕಾರಿಗೆ ಢಿಕ್ಕಿ ಹೊಡೆದು ಉಂಟಾದ ಭೀಕರ ಅಪಘಾತದಲ್ಲಿ ಓರ್ವ ಮಹಿಳೆ ಮತ್ತು ಒಂದು ಮಗು ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಶಂಕರಪುರ ಕ್ರಾಸಿಂಗ್‌ನಲ್ಲಿ ನಡೆದಿದ್ದ ಈ ಅವಘಡದಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ ಮಗು ಅನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿತು. ಅಪಘಾತ ಸಂಭವಿಸಿದೊಡನೆಯೇ ಟ್ರಕ್‌ ಚಾಲಕ ಪರಾರಿಯಾಗಿದ್ದಾನೆ.

ಮೃತರನ್ನು ದಿನೇಶ್‌ 30, ವಿಪಿನ್‌ 22, ವಿಪಿನ್‌ನ ತಾಯಿ ವಿಜಯ ಕುಮಾರಿ 45, ಮತ್ತು ಮೋನು ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮೊಹಮ್ಮದಿ ಯ ನಗರ ಗ್ರಾಮದ ನಿವಾಸಿಗಳಾಗಿದ್ದಾರೆ. ಇಬ್ಬರು ಗಾಯಾಳುಗಳ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next