Advertisement

ತಂಡದ ಫಿಟ್ನೆಸ್‌ ಉತ್ತಮವಾಗಿದೆ: ನಾಯಕ ಕೊಹ್ಲಿ

09:50 PM Sep 12, 2020 | mahesh |

ದುಬಾೖ: ಐದು ತಿಂಗಳ ಕೋವಿಡ್ ಪ್ರೇರಿತ ವಿರಾಮದ ಬಳಿಕವೂ ಆರ್‌ಸಿಬಿ ತಂಡದ ಆಟಗಾರರ ಫಿಟ್ನೆಸ್ ಬಗ್ಗೆ ನಾಯಕ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಯುಎಇಗೆ ಆಗಮಿಸಿದ ಅನಂತರ ಮೊದಲ ತರಬೇತಿಯಿಂದ ಎಲ್ಲರಲ್ಲು ಉತ್ಸಾಹ ಮೂಡಿದೆ. ಅದರಂತೆ ಫಿಟ್ನೆಸ್‌ ವಿಚಾರದಲ್ಲಿ ಎಲ್ಲರೂ ಉತ್ತಮ ಸ್ಥಿತಿಯಲ್ಲಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಮೊದಲ ಬಾರಿಯ ತರಬೇತಿಯಿಂದ ನನಗೂ ಸಾಕಷ್ಟು ಒಳಿತಾಗಿದೆ. ಎಂದು ಕೊಹ್ಲಿ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಆರು ದಿನಗಳಲ್ಲಿ 6 ಸೆಷನ್‌ಗಳನ್ನು ಮಾಡುವಂತಹ ಹುಚ್ಚು ಸಾಹಸ ಮಾಡಲು ನಾನು ಬಯಸುವುದಿಲ್ಲ. ನಾವು ತಂಡದ ಸದಸ್ಯರಿಗೆ ಸಾಕಷ್ಟು ಸಮಯವನ್ನು ನೀಡಿದ್ದೇವೆ. ಈ ಮುಂದಿನ ಕೆಲವು ತರಬೇತಿ ಅವಧಿಗಳಲ್ಲಿಯೂ ನಾವು ಇದನ್ನು ಮುಂದುವರಿಸುತ್ತೇವೆ ಎಂದು ಕೊಹ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next