Advertisement
ನಗರದ ಹೃದಯ ಭಾಗದಲ್ಲಿದ್ದ ಈ ವ್ಯವಸ್ಥೆಯನ್ನು ವಾಹನ ಚಾಲಕ/ ಮಾಲಕರ ಹಾಗೂ ಸಾರಿಗೆ ಇಲಾಖೆಯ ಹಿತ ದೃಷ್ಟಿಯಿಂದ 2017ರಲ್ಲಿ ಹೊರವಲಯಕ್ಕೆ (ಕೆಪಿಟಿ ಪಕ್ಕ) ಸ್ಥಳಾಂತರಿ ಸಲಾಗಿತ್ತು. ಆದರೆ ಆವರಣ ಆಗಿ ಇಷ್ಟು ಸಮಯ ವಾದರೂ, ಹಲವಾರು ಮೂಲ ಸೌಲಭ್ಯಗಳ ಕೊರತೆ ಇಲ್ಲಿ ಈಗಲೂ ಕಾಡುತ್ತಿದೆ.
Related Articles
Advertisement
ಕೆಪಿಟಿ ಪಕ್ಕದಲ್ಲಿ ಈ ಕೇಂದ್ರ ಇದ್ದರೂ, ಅಲ್ಲಿಗೆ ಎಲ್ಲಿಂದ ತೆರಳಬೇಕು ಎಂಬ ಬಗ್ಗೆ ಕೆಲವರಿಗೆ ಗೊಂದಲವಿದೆ. ದಾರಿ ಹುಡುಕಿಕೊಂಡು ಹೋಗಬೇಕಾಗಿದೆ. ದಾರಿ ತೋರುವ ಸೂಚಕ ಫಲಕವೂ ಹೆದ್ದಾರಿ ಬದಿಯಲ್ಲಿಲ್ಲ. ಇನ್ನು, ಕೇಂದ್ರದ ಹೊರಭಾಗದಲ್ಲಿರುವ ಒಂದು ಬೋರ್ಡ್ ಸಂಪೂರ್ಣ ಗಿಡ ಗಂಟಿಗಳಿಂದ ತುಂಬಿಕೊಂಡಿದೆ. ಸ್ವಚ್ಛತೆಯೂ ಇಲ್ಲಿ ಮರೆಯಾಗಿದೆ.
‘ಸೌಲಭ್ಯ ಕಲ್ಪಿಸಿ’
ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದ ಪ್ರದೇಶದಲ್ಲಿ ಕಚೇರಿ ಇರುವುದು ಶೋಚನೀಯ. ಫಿಟ್‌ನೆಸ್ ಸರ್ಟಿಫಿಕೆಟ್ ಪಡೆದುಕೊಳ್ಳಲು ಬರುವವರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ಒದಗಿಸಲು, ಕುಳಿತುಕೊಳ್ಳಲು ಹಾಗೂ ಶೌಚಾಲಯ ಮುಂತಾದ ಕನಿಷ್ಠ ಸೌಲಭ್ಯಗಳನ್ನು ಸಾರಿಗೆ ಇಲಾಖೆ ನೀಡಬೇಕು ಎಂದು ಚಾಲಕ ರಾದ ಕಿಶೋರ್ ಅವರು ‘ಸುದಿನ’ ಜತೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಟಿಒ ಕಚೇರಿ ಹಿಂಭಾಗದಲ್ಲಿದ್ದ ಕೇಂದ್ರ
ಮಂಗಳೂರಿನಲ್ಲಿ ಈ ಹಿಂದೆ ಆರ್‌ಟಿಒ ಕಚೇರಿಯ ಹಿಂಭಾಗದಲ್ಲಿಯೇ ಫಿಟ್‌ನೆಸ್ ಸರ್ಟಿಫಿಕೆಟ್‌ಯಾರ್ಡ್ ಇತ್ತು. ಸಾರಿಗೆ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿದ ಬಳಿಕ ಈ ಯಾರ್ಡ್‌ನಲ್ಲಿ ವಾಹನವನ್ನು ಪರೀಕ್ಷಿಸಿ ನಿಗದಿತ ಸಮಯದಲ್ಲಿ ಫಿಟ್‌ನೆಸ್ ಸರ್ಟಿಫಿಕೆಟ್ ನೀಡಲಾಗುತ್ತಿತ್ತು. ಈಗ ಫಿಟ್‌ನೆಸ್ ಸರ್ಟಿಫಿಕೆಟ್‌ಯಾರ್ಡ್ ನ್ನು ಕೆಪಿಟಿ ಬಳಿಗೆ ಸ್ಥಳಾಂತರಿಸಿದ ಕಾರಣ ನಿಗದಿತ ಶುಲ್ಕವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪಾವತಿಸಿ ಬಳಿಕ ಕೆಪಿಟಿ ಬಳಿಯ ಯಾರ್ಡ್‌ಗೆ ವಾಹನವನ್ನು ಕೊಂಡೊಯ್ದು ತಪಾಸಣೆಗೆ ಒಳ ಪಡಿಸಬೇಕಾಗಿದೆ.