Advertisement

ಫಿಟ್‌ನೆಸ್‌, ಜಿಮ್‌ ಆಯ್ದ ಕ್ರೀಡಾ ಚಟುವಟಿಕೆ ಆರಂಭಕ್ಕೆ ಮನವಿ

08:19 AM May 14, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿನ ಫಿಟ್‌ನೆಸ್‌ ಸೆಂಟರ್‌, ಜಿಮ್‌, ಗಾಲ್ಫ್ ಸೇರಿದಂತೆ ಆಯ್ದ ಕ್ರೀಡಾ ಅಭ್ಯಾಸಕ್ಕೆ ಅವಕಾಶ ನೀಡಬೇಕೆಂಬ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಕೇಂದ್ರದ ಸೂಚನೆ ಆಧರಿಸಿ ಮೇ 17ರ ಬಳಿಕ  ಸಾಧ್ಯವಾದಷ್ಟು ಸಡಿಲಿ ಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

Advertisement

ಗೃಹ ಕಚೇರಿ “ಕೃಷ್ಣಾ’ದಲ್ಲಿ ಬುಧವಾರ ಮುಖ್ಯ ಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬಳಿಕ  ಪ್ರತಿ  ಕ್ರಿಯಿಸಿ, ಫಿಟ್‌ನೆಸ್‌ ಸೆಂಟರ್‌, ಜಿಮ್‌ ನಡೆಸುವವರು, ಈಜುಗಾರಿಕೆ ಸಂಬಂಧಿತ ಸಂಸ್ಥೆಯವರು ಭೇಟಿಯಾಗಿ ಆಯ್ದ ಚಟುವಟಿಕೆ, ತಯಾರಿಗೆ ಅವಕಾಶ ನೀಡುವಂತೆ ಕೋರಿದ್ದರು. ಆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು. ಫಿಟ್‌ನೆಸ್‌ ಸೆಂಟರ್‌, ಜಿಮ್‌ಗಳಲ್ಲಿ ಸಾಮಾಜಿಕ ಅಂತರದ ಜತೆಗೆ ನೈರ್ಮಲ್ಯಕ್ಕೆ ಒತ್ತು ನೀಡುವುದಾಗಿ ಹೇಳಿದ್ದಾರೆ.

ಗುಂಪಿಗೆ ಬದಲಾಗಿ ವ್ಯಕ್ತಿಗತ ವಾಗಿ ಕ್ರೀಡಾ ಚಟುವಟಿಕೆ, ಅಭ್ಯಾಸಕ್ಕೆ ಅವಕಾಶ ಕೋರಿದ್ದಾರೆ. ಗಾಲ್ಫ್ ಕ್ರೀಡೆಯಲ್ಲಿ ಸಾಕಷ್ಟು ಅಂತ ರವಿರುತ್ತದೆ. ಜತೆಗೆ ಸುರಕ್ಷತೆಗೂ ಒತ್ತು ನೀಡುವು ದಾಗಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯ ಮಂತ್ರಿಗಳ ಬಳಿ ಪ್ರಸ್ತಾಪಿಸಲಾಯಿತು. ಕೇಂದ್ರ ಸರ್ಕಾರ ನೀಡುವ ಮುಂದಿನ ಸೂಚನೆ ಆಧರಿಸಿ ಕೆಲ ಷರತ್ತುಗಳೊಂದಿಗೆ  ಸೀಮಿತ ಚಟುವಟಿಕೆ ನಡೆ ಸಲು ಅವಕಾಶ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಗಳಿಗೆ ಕೇಂದ್ರ ಅನುದಾನ ಬಿಡುಗಡೆ ಮಾಡಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಕೇಂದ್ರ  ಸರ್ಕಾರ ತಾರತಮ್ಯ ತೋರಿಲ್ಲ. ಇದು ಪ್ರತಿಪಕ್ಷಗಳು ವಿರೋಧಕ್ಕಾಗಿಯೇ ಇರುವಂತಹ ಮನಸ್ಥಿತಿಯನ್ನು ತೋರಿಸುತ್ತದೆ. 
-ಸಿ.ಟಿ.ರವಿ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next