Advertisement

ಮೀನುಗಾರರ ಪರ ಮೀನುಗಾರಿಕಾ ನೀತಿ: ಪ್ರಮೋದ್‌

03:45 AM Jul 11, 2017 | Team Udayavani |

ಮಂಗಳೂರು: ರಾಜ್ಯದಲ್ಲಿ ಜಾರಿಗೆ ತರಲುದ್ದೇಶಿಸಿರುವ ಮೀನುಗಾರಿಕಾ ನೀತಿಯು ಮೀನುಗಾರರು ಮತ್ತು ಸರಕಾರದ ಪರವಾಗಿ ಇರಲಿದೆಯೇ ಹೊರತು ಮಧ್ಯವರ್ತಿಗಳ ಪರವಾಗಿ ಇರಲಾರದು ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ಸೋಮವಾರ ಎಕ್ಕೂರಿನ ಫಿಶರೀಸ್‌ ಕಾಲೇಜಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಮೀನುಗಾರಿಕಾ ಇಲಾಖೆಯ ಆಶ್ರಯದಲ್ಲಿ  ನಡೆದ ರಾಷ್ಟ್ರೀಯ ಮೀನು ಕೃಷಿ ದಿನಾಚರಣೆ-2017 ಸಮಾರಂಭವನ್ನು ಅವರು ಉದ್ಘಾಟಿಸಿದರು.

ಮಿತಿ ಮೀರಿದ ಸಮುದ್ರ ಮೀನುಗಾರಿಕೆ ಮತ್ತು ಒಳನಾಡಿನಲ್ಲಿ ಅಸಮರ್ಪಕ ಮೀನುಗಾರಿಕೆಯ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಸಮುದ್ರ ಮೀನುಗಾರಿಕೆಗೆ ಸ್ಪಷ್ಟ ನೀತಿ ಅತೀ ಅಗತ್ಯ. ಆಂಧ್ರ ಪ್ರದೇಶ ದಂತಹ ರಾಜ್ಯಗಳು ಒಳನಾಡು ಮೀನುಗಾರಿಕೆ ಯಲ್ಲಿ ಸಾಧನೆ ಮಾಡಿವೆ; ಆದರೆ ನಮ್ಮಲ್ಲಿ ನಿರ್ಲಕ್ಷ್ಯ ತೋರ ಲಾಗಿದೆ. ಇದು ವಿಷಾದ ನೀಯ ಎಂದು ಸಚಿವರು ವಿವರಿಸಿದರು.

ರೈತರಿಗೆ ಪ್ರವಾಸ
ಉತ್ತರ ಕರ್ನಾಟಕದ ಜೇವರ್ಗಿಯ ಹೊಲಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ಕೃಷಿಕರನ್ನು ಪ್ರೋತ್ಸಾಹಿಸುವಂತೆ ಅ ಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರಿಗೆ ಕಬ್ಬು ಬೆಳೆಗಿಂತ ಹೆಚ್ಚಿನ ಲಾಭ ಮೀನುಗಾರಿಕೆಯಿಂದ ಬರಲಿದೆ. ಆದ್ದ ರಿಂದ ರೈತರಿಗೆ ಆಂಧ್ರಪ್ರದೇಶ ಪ್ರವಾಸ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ವಾರ್ಷಿಕ 90 ಕೋಟಿ ಮೀನು ಮರಿಗಳ ಬೇಡಿಕೆ ಇದ್ದರೂ 60 ಕೋಟಿ ಮಾತ್ರ ಉತ್ಪಾದನೆ ಮಾಡ ಲಾಗುತ್ತಿದೆ. ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕರಾವಳಿಯಲ್ಲಿ ಜಲಕೃಷಿಗೆ ಸಿಆರ್‌ಝಡ್‌ ನಿಯಮ ಅಡ್ಡಿಯಾಗುತ್ತಿದ್ದು, ಅದನ್ನು ಸರಿ ಪಡಿಸಲು ಕೇರಳ, ತಮಿಳುನಾಡು, ಆಂಧ್ರ ಮಾದರಿ ನಿಯಮ ಪಾಲಿಸ ಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

Advertisement

ಫಿಶರೀಸ್‌ ಕಾಲೇಜಿನ ಡೀನ್‌ ಡಾ| ಎಂ.ಎನ್‌. ವೇಣುಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ ಅವರು ಮಾತನಾಡಿದರು. ಮೀನುಗಾರಿಕಾ ಕಾಲೇಜಿನ ಜಲಕೃಷಿ ವಿಭಾಗದ ಮುಖ್ಯಸ್ಥ ಡಾ| ಇ.ಜಿ. ಜಯರಾಜ್‌ ಸ್ವಾಗ ತಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಶಿವಕುಮಾರ್‌ ಮಗದ ಪ್ರಸ್ತಾವನೆಗೈದರು.

ಮೀನುಮರಿ ಬಿಡುಗಡೆ
ಫಿಶರೀಸ್‌ ಕಾಲೇಜು ಅಭಿವೃದ್ಧಿ ಪಡಿಸಿದ ಅಮೂರ್‌ ತಳಿಯ ಮೀನು ಮರಿಗಳನ್ನು ಸಚಿವರು ಅಕ್ವೇರಿಯಂಗೆ ಬಿಡುಗಡೆ ಮಾಡಿದರು ಹಾಗೂ ಆಧುನಿಕ ಮೀನು ಕೃಷಿ ಸಂಬಂಧಿತ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮೀನಿನ ಆಹಾರವನ್ನು ಮೀನು ಕೃಷಿಕರಿಗೆ ವಿತರಿಸಲಾಯಿತು. ಸುಮಾರು 100 ಜನ ಮೀನು ಕೃಷಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next