Advertisement

ನಾಡದೋಣಿ ಕೈರಂಫಣಿ ಬಲೆಗೆ ಬಿದ್ದ ಭಾರಿ ಪ್ರಮಾಣ ಮೀನು ಸಾರ್ವಜನಿಕರ ಪಾಲು!

10:11 PM Aug 29, 2020 | sudhir |

ಕಟಪಾಡಿ: ಮಟ್ಟು ಕಡಲ ತೀರದಲ್ಲಿ ಸಾಂಪ್ರದಾಯಿಕ ನಾಡದೋಣಿ ಕೈರಂಫಣಿ ಬಲೆಯನ್ನು ಬೀಸಿದ ಸಂದರ್ಭ ಹೇರಳ ಪ್ರಮಾಣದ ಮೀನು ಬಲೆಗೆ ಬಿದ್ದಿದ್ದು, ಬಲೆಯಿಂದ ಹೆಚ್ಚಾಗಿ ಉಳಿದ ಮೀನುಗಳನ್ನು ಸಮುದ್ರ ತೀರದಲ್ಲಿಯೇ ಮೀನುಗಾರರು ಕಳೆದ ಎರಡು ದಿನಗಳಿಂದ ಬಿಟ್ಟಿರುತ್ತಾರೆ.

Advertisement

ಎರ್ಮಾಳು ಕೈರಂಫಣಿ ಫಂಡ್‍ನವರು ಬೀಸಿದ ಬಲೆಗೆ ಹೇರಳ ಮೀನು ಬಿದ್ದಿದ್ದು, ಬಂಗುಡೆ, ಬೊಳಿಂಜಿರ್, ಕಲ್ಲೂರು, ಬೂತಾಯಿ ಕೊಂತಿ, ಎಟ್ಟಿಯಂತಹ ಮೀನುಗಳು ಬಲೆಯಲ್ಲಿ ಸಿಕ್ಕಿವೆ.

ಭಾರೀ ಪ್ರಮಾಣದ ಮೀನುಗಳನ್ನು ಎಳೆಯಲಾಗದೆ ಬಲೆಯಿಂದ ಹೊರಕ್ಕೆ ಬಿದ್ದು, ಸಾರ್ವಜನಿಕರ ಪಾಲಾಗಿತ್ತು. ಮಾಹಿತಿ ಅರಿತ ಮೀನು ಪ್ರಿಯರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಚೀಲವನ್ನು ತುಂಬಿಸಿಕೊಂಡು ತೆರಳಿರುತ್ತಾರೆ. ಕೆಲ ಮನೆಗಳ ಫ್ರಿಡ್ಜ್ ನಲ್ಲಿ ಸುಮರು 2 ವಾರಗಳಿಗಾಗುವಷ್ಟು ಮೀನು ಸಂಗ್ರಹಿಸಲಾಗಿರಬಹುದೆಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next