Advertisement

ಸ್ಥಳೀಯರ ಮಾತನ್ನು ಧಿಕ್ಕರಿಸಿ ಕಡಲಿಗಿಳಿದ ಯುವಕನನ್ನು ರಕ್ಷಿಸಿದ ಮೀನುಗಾರರು!

10:13 AM Jun 29, 2020 | Hari Prasad |

ಸುರತ್ಕಲ್: ಇದು ಮಳೆಗಾಲದ ಸಮಯ, ಪಶ್ಚಿಮ ಸಮುದ್ರ ಪ್ರಕುಬ್ಧವಾಗಿರುವ ಕಾಲ.

Advertisement

ಸಾಮಾನ್ಯವಾಗಿ ಮಳೆಗಾಲವನ್ನು ಹೊರತುಪಡಿಸಿದ ದಿನಗಳಲ್ಲೂ ಕಡಲುಬ್ಬರ ಇದ್ದ ಸಂದರ್ಭಗಳಲ್ಲಿ ಸಮುದ್ರಕ್ಕೆ ಇಳಿಯುವುದು ಅಪಾಯಕಾರಿ.

ಆದರೆ ಮಳೆಗಾಲದಲ್ಲಿ ಮೀನುಗಾರರೂ ಸಮುದ್ರಕ್ಕೆ ಇಳಿಯುವುದಿಲ್ಲ ಮತ್ತು ಇದು ತಲೆ ತಲಾಂತರಗಳಿಂದ ನಮ್ಮ ಕಡಲ ಮಕ್ಕಳು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ.

ಆದರೆ ಪ್ರವಾಸಿಗರಿಗೆ ಇದೆಲ್ಲಾ ಅರ್ಥವಾಗುವುದೇ ಇಲ್ಲ ಮತ್ತು ಈ ಮಾತಿಗೆ ಪೂರಕ ಎಂಬಂತ ಘಟನೆಯೊಂದು ಇಂದು ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ನಡೆದಿದೆ.


ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಸಮುದ್ರದಲ್ಲಿ ಲಂಗರು ಹಾಕಿ ನಿಂತಿರುವ ಭಗವತೀ ಪ್ರೇಂ ಎಂಬ ಬೃಹತ್ ನೌಕೆಯನ್ನು ನೋಡಲು ಜನ ಬರುತ್ತಿದ್ದಾರೆ. ಅದರಲ್ಲೂ ರಜಾ ದಿನವಾಗಿದ್ದ ನಿನ್ನೆ ಜನ ಸ್ವಲ್ಪ ಹೆಚ್ಚೇ ಇದ್ದರು.

ಈ ನಡುವೆ ಪುತ್ತೂರಿನಿಂದ ಬಂದವರೆನ್ನಲಾಗಿದ್ದ ಯುವಕ ಯುವತಿಯರ ಗುಂಪಿನಲ್ಲಿದ್ದ ಕೆಲವರು ಸ್ಥಳೀಯ ಮೀನುಗಾರರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದಿದ್ದಾರೆ. ಇವರಲ್ಲಿ ಯುವಕನೊಬ್ಬ ಈಜಾಡುತ್ತಾ ಈ ನೌಕೆಯ ಹತ್ತಿರ ಹೋದವ ಅಲೆಗಳ ರೌದ್ರತೆಗೆ ಭಯಗೊಂಡು ನೌಕೆಯ ಲ್ಯಾಡರ್ ಏರಿನಿಂತು ಸಹಾಯಕ್ಕಾಗಿ ಅಂಗಲಾಚಿದ್ದಾನೆ.

Advertisement

ಈ ಸಂದರ್ಭದಲ್ಲಿ ಗುಡ್ಡೆಕೊಪ್ಪ ನಿವಾಸಿಗಳಾದ ಯಾದವ ಶ್ರೀಯಾನ್ ಹಾಗೂ ಸುಮನ್ ಕೋಟ್ಯಾನ್ ಅವರ ತಂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಭೋರ್ಗರೆಯಿತ್ತಿದ್ದ ಅಲೆಗಳ ನಡುವೆ ಈಜಾಡಿ ಆ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡುಬಂದಿದ್ದಾರೆ.

ಇದೀಗ ಶ್ರೀಯಾನ್ ಹಾಗೂ ಸುಮನ್ ಅವರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ ಸಲಹೆಗೆ ಕಿವಿಕೊಡಬೇಕೆಂಬ ಆಗ್ರಹವೂ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next