ಉಪ್ಪುಂದ : ಮೀನುಗಾರಿಕೆಗೆ ತೆರಳಿದ ದೋಣಿ ವಾಪಾಸು ದುಡಿದು ಸಮೀಪದ ಬರುತ್ತೀರುವಾಗ ಅಲೆಗಳು ಹೊಡೆತಕ್ಕೆ ದೋಣಿ ಮುಳುಗಡೆಗೊಂಡು ಇಬ್ಬರು ನಾಪತ್ತೆಯಾದ ಘಟನೆ ಪಡುವರಿ ಗ್ರಾಮ ದ ಅಳ್ವಕೋಡಿ ತಾರಾಪತಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ವಾಸು ಖಾರ್ವಿಯವರಿಗೆ ಸೇರಿದ ಪಟ್ಟೆಬಲೆ ದೋಣಿಯಲ್ಲಿ ಒಟ್ಟು 8 ಜನ ತೆರಳಿದ್ದು ಅವರಲ್ಲಿ ಚರಣ (27) ಹಾಗೂ ಅಣ್ಣಪ್ಪ (45)ನಾಪತ್ತೆಯಾಗಿದ್ದಾರೆ.
ಮೀನುಗಾರ ರು ಶುಕ್ರವಾರ ಬೆಳ್ಳಗೆ ಮೀನುಗಾರಿಕೆ ನಡೆಸಲು ಹೋಗಿದ್ದು ದೋಣಿಯಲ್ಲಿ ಮೀನು ತುಂಬಿಕೊಂಡು ಹಿಂದಿರುವಾಗ ದಡದ ಸಮೀಪ ಸುಮಾರು 150 ಮೀ.ದೂರ ಇರುವಾಗ ಬ್ರಹತ್ ಅಲೆ ಮುಂದೊಂದು ದೋಣಿ ಗೆ ಬಂದು ಅಪ್ಪಳಿಸಿದ ಪರಿಣಾಮ ದೋಣಿ ಅಲೆಗಳು ಹೊಡೆತಕ್ಕೆ ಸಿಲುಕಿ ಮುಳುಗಿ ದೆ. 6 ಮಂದಿ ಮೀನುಗಾರರು ಈಜಿ ದಡ ಸೇರಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ಮೀನುಗಾರರು ಅಲೆಗಳೋಂದಿಗೆ ನಾಪತ್ತೆ ಯಾಗಿದ್ದಾರೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಯೂಟ್ಯೂಬ್ ನಿಂದ ತಿಂಗಳಿಗೆ 4 ಲಕ್ಷ ರೂ ಸಂಪಾದಿಸುವ ಗಡ್ಕರಿ!