Advertisement

ಮೀನು ಸಾಗಾಟದ ವಾಹನ ಪಲ್ಟಿ: ಚಾಲಕನಿಗೆ ಗಾಯ

12:01 PM Mar 14, 2017 | Team Udayavani |

ಪಡುಬಿದ್ರಿ: ಎರ್ಮಾಳು ಬಳಿ ಸೋಮವಾರ ಬೆಳಗ್ಗೆ ಮೀನು ಸಾಗಾಟದ ವಾಹನವೊಂದು ಪಲ್ಟಿಯಾಗಿ ಚಾಲಕ ಜಾವೇದ್‌ (25) ಬಲಗೈ ಮೂಳೆ ಮುರಿತಕ್ಕೊಳಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

ಮಲ್ಪೆಯಿಂದ ಮೀನನ್ನು ಹೇರಿಕೊಂಡು ಕೇರಳದತ್ತ ಹೋಗುತ್ತಿದ್ದ ಈ ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. 

ವಾಹನವು ಡಿವೈಡರನ್ನು ಏರಿ ರಸ್ತೆಯ ಮತ್ತೂಂದು ಮಗ್ಗುಲಿನ ಆಚೆಯ ಸುಮಾರು 10 ಅಡಿಗಳ ಕಂದಕಕ್ಕೆ ಉರುಳಿದೆ. ಪವಾಡಸದೃಶವಾಗಿ ಚಾಲಕ ಬದುಕುಳಿದಿದ್ದು ವಾಹನವು ಸಂಪೂರ್ಣ ಜಖಂಗೊಂಡಿದೆ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next