Advertisement
ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಈಗ ಮೀನುಗಾರಿ ಕೆಗೆ ರಜೆ. ಕೇರಳ ರಾಜ್ಯ ವ್ಯಾಪ್ತಿಯಲ್ಲಿ ಮೀನಿನ ಪ್ರಮಾಣ ಕುಸಿದಿದೆ. ರಾಜ್ಯದ ಕರಾವಳಿಯಲ್ಲಿ ಸಿಗುವ ಅಲ್ಪ ಪ್ರಮಾಣದ ಮೀನಿಗೆ ಬೇಡಿಕೆ ಹೆಚ್ಚು.
ಕೆಲವು ತಿಂಗಳಿನಿಂದ ಮೀನುಗಾರರು ಮೀನಿನ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕರ ಕೊರತೆಯಿಂದ ಬಹುತೇಕ ಪಸೀನ್ ಮೀನುಗಾರಿಕೆ ಕೊನೆಯ ಎರಡು ತಿಂಗಳು ಸಂಪೂರ್ಣ ಸ್ಥಗಿತಗೊಂಡಂತಾಗಿದೆ. ಆಳಸಮುದ್ರ ಬೋಟುಗಳಿಗೆ ಡೀಸೆಲ್ ದರದ ಹೊರೆ, ಸಿಗುವ ಮೀನಿನ ಪ್ರಮಾಣ ಸರಿದೂಗದೆ ನಷ್ಟವಾಗುತ್ತಿದೆ. ಇದರಿಂದ ಶೇ. 30ರಷ್ಟು ಮೀನುಗಾರರು ಬೋಟನ್ನು ದಡ ಸೇರಿಸಿದ್ದಾರೆ. ಸಣ್ಣ ಟ್ರಾಲ್‌ದೋಣಿ, ತ್ರಿಸೆವೆಂಟಿ ಬೋಟ್‌ಗಳನ್ನು ದಡದಲ್ಲಿ ಕಟ್ಟಿಡಲಾಗಿದೆ. ರಾಣಿ ಮೀನು ಕುಸಿತ
ಈ ಹಿಂದೆ ಋತುವಿನ ಅಂತ್ಯದ ಎರಡು ತಿಂಗಳಲ್ಲಿ ಹೆಚ್ಚಾಗಿ ರಾಣಿಮೀನು ಬಹುತೇಕ ಆಳಸಮುದ್ರ ಬೋಟುಗಳಿಗೆ ಟನ್‌ಗಟ್ಟಲೆ ಸಿಗುತ್ತಿತ್ತು. ಇದರಿಂದಲೇ ಹೆಚ್ಚಿನ ಬೋಟುಗಳಿಗೆ ಕೊನೆಯ ಎರಡು ತಿಂಗಳು ಮೀನುಗಾರಿಕೆ ಲಾಭದಾಯಕವಾಗಿತ್ತು. ಈ ಬಾರಿ ರಾಣಿ ಮೀನಿನ ಪ್ರಮಾಣ ತೀವ್ರ ಕುಸಿತ ಕಂಡಿದೆ ಎಂದು ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಾಕರ ವಿ. ಸುವರ್ಣ ಅವರು ತಿಳಿಸಿದ್ದಾರೆ.
Related Articles
ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆ ಇಲ್ಲಿದಿರುವುದ ರಿಂದ ಇಲ್ಲಿನ ಮೀನುಗಳು ಅಲ್ಲಿಗೆ ಸಾಗಾಟವಾಗುತ್ತಿವೆ. ಮಾತ್ರವಲ್ಲದೆ ಹವಾಮಾನದ ವೈಪರೀತ್ಯದಿಂದಲೂ ಸಮುದ್ರದಲ್ಲಿ ಮೀನಿನ ಪ್ರಮಾಣ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮೀನಿನ ಬೆಲೆ ಹೆಚ್ಚಾಗಲು ಕಾರಣ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಅವರು ತಿಳಿಸಿದ್ದಾರೆ.
Advertisement
ಮೀನಿನ ಅಭಾವ ಒಂದೆಡೆಯಾದರೆ, ಇಂಧನ ದರ ಏರಿಕೆಯ ಹೊರೆಯೂ ಏರುತ್ತಿದೆ. ಒಂದು ಪ್ರಯಾಣ (ಸುಮಾರು 10 ದಿನ)ದಲ್ಲಿ ಕನಿಷ್ಠ 6 ಲಕ್ಷ ರೂ. ಸಂಪಾದನೆ ಆದರೂ ಅಲ್ಲಿಂದಲ್ಲಿಗೆ ಆಗುತ್ತದೆ. ಕೆಲವೂ ಬೋಟ್‌ಗಳು ಕನಿಷ್ಠ ಸಂಪಾದನೆಯೂ ಇಲ್ಲದೆ ನಷ್ಟ ಅನುಭವಿಸುತ್ತಿವೆ. ಇಳುವರಿ ಕಡಿಮೆಯಾಗಿರುವುದರಿಂದ ಸಣ್ಣಪುಟ್ಟ ಮೀನಿಗೂ ಬೇಡಿಕೆ ಬಂದಿದೆ.– ಸತೀಶ್ ಕುಂದರ್, ಮೀನುಗಾರ ಮುಖಂಡ,
ಬೋಟ್ ಮಾಲಕ – ನಟರಾಜ್ ಮಲ್ಪೆ