Advertisement

ಪಡುಬಿದ್ರಿ: ಮತ್ತೆ ಮೀನು ಸುಗ್ಗಿ !

09:54 AM Sep 28, 2018 | |

ಪಡುಬಿದ್ರಿ: ಕೆಲವು ದಿನಗಳ ಹಿಂದೆ ಬೊಳಿಂಜೀರ್‌ (ಸಿಲ್ವರ್‌ ಫಿಶ್‌) ಮೀನುಗಳ ಸುಗ್ಗಿಯಾಗಿದ್ದ ಪಡುಬಿದ್ರಿ- ಎರ್ಮಾಳು ಕಡಲತೀರದಲ್ಲಿ ಇಂದು ಮತ್ತೆ ಬಗೆಬಗೆಯ ಮೀನುಗಳು ಸಮೃದ್ಧವಾಗಿ ಕೈರಂಪಣಿ ಮೀನುಗಾರರಿಗೆ ದೊರಕಿವೆ.

Advertisement

ಎರ್ಮಾಳು ತೆಂಕ ಪಂಢರಿನಾಥ ಮತ್ತು ವೀರಾಂಜನೇಯ ಕೈರಂಪಣಿ ಫಂಡುಗಳು ಸಮುದ್ರದಲ್ಲಿ ಬೀಸಿದ ಬಲೆಗಳಲ್ಲಿ ಮಾಂಜಿ (ಪಾಂಫ್ರೆಟ್‌), ಕೊಡ್ಡಾಯಿ, ಕಲ್ಲೂರು, ಬತ್ತ ಅಥವಾ ಕಡುವಾಯಿ, ಎರೆಬಾಯಿ, ಮಣಂಗು ಸಹಿತ ಹಲವು ಬಗೆಯ ಮೀನುಗಳು ವಿಪುಲವಾಗಿ ದೊರಕಿದ್ದು, ದೂರದ ಊರುಗಳಿಂದ ಮತ್ಸಪ್ರಿಯರು ಎರ್ಮಾಳಿನತ್ತ ಧಾವಿಸುತ್ತಿದ್ದಾರೆ.

ಬೆಳಗ್ಗೆ ಸಮುದ್ರಕ್ಕಿಳಿದ ಕೈರಂಪಣಿಗೆ ಪ್ರಥಮ ಯತ್ನದಲ್ಲಿ ಯಾವುದೇ ಮೀನುಗಳು ದೊರಕಿರಲಿಲ್ಲ. 8 ಗಂಟೆ ಸುಮಾರಿಗೆ ತೀರ ಸಮುದ್ರದಲ್ಲಿ ಮೀನಿನ ತೆಪ್ಪಗಳನ್ನು ಕಂಡ ಅವರು ಎರಡನೇ ಬಾರಿ ಬಲೆಗಳನ್ನು ಬೀಸಿದ್ದು, ಊಹೆಗೂ ನಿಲುಕದಷ್ಟು ಸಿಲುಕಿಕೊಂಡವು. ರಾತ್ರಿ ವರೆಗೂ ಬಲೆಗಳಿಂದ ತೆಗೆದರೂ ಮುಗಿಯದಷ್ಟು ಹೇರಳವಾಗಿತ್ತು.

ಸೆ. 5ರಂದು ಹೆಜಮಾಡಿಯಿಂದ ಎರ್ಮಾಳು ತನಕ ಬೊಳಿಂಜೀರ್‌ ಕೈರಂಪಣಿಗಳಿಗೆ ಹೇರಳವಾಗಿ ದೊರ ಕಿತ್ತು. ಸೆ. 24ರ ವರೆಗೂ ಮೂಲ್ಕಿಯ ಶಾಂಭವಿ ಹೊಳೆಯಲ್ಲಿಯೂ ಇದೇ ರೀತಿ ಮುಂದು ವರಿದಿತ್ತು. ಇದೀಗ ಹಲವು ಬಗೆಯ ಮೀನುಗಳು ಲಭಿಸುತ್ತಿರುವುದರಿಂದ ಸಾಂಪ್ರದಾಯಿಕ ಮೀನುಗಾರರು ಭಾರೀ ಖುಷಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next