Advertisement
ಮೀನಿನ ದರಬಂಗುಡೆ ಕೆ.ಜಿ.ಗೆ 100 ರೂ., ಬೂತಾಯಿ ಕೆ.ಜಿ. 80 ರೂ., ಅಂಜಲ್‌ಗೆ 50 ರೂ. ಮಾರಾಟವಾಗುತ್ತಿದ್ದು, 300 ರೂ.ಯಷ್ಟು ಕುಸಿದಿದೆ. ಬಿಳಿ ಮೀನು (ಸಿಲ್ವರ್ ಫಿಶ್) ಕೆ.ಜಿ.ಗೆ 50 ರೂ.ಗೆ ಇಳಿಕೆಯಾಗಿದ್ದು, 100 ರೂ.ಗೆ ಮಾರಾಟವಾಗುತ್ತಿದೆ. ದೊಡ್ಡ ಮೀನುಗಳನ್ನು ಹೊರತು ಪಡಿಸಿ, ಉಳಿದ ಚಿಕ್ಕಪುಟ್ಟ ಮೀನು ಕೆ.ಜಿ.ಗೆ 50ರಿಂದ 100ರೂ. ಒಳಗೆ ಸಿಗುತ್ತಿದೆ.
ಪ್ರಸ್ತುತ ಮಲ್ಪೆ ಬೋಟ್‌ಗಳಿಗೆ ಮೀನು ಹೇರಳವಾಗಿ ಲಭ್ಯವಾಗುತ್ತಿದೆ. ಜತೆಗೆ ಕೊರೊನಾ ಹಿನ್ನೆಲೆಯಲ್ಲಿ ರಫ್ತಿನಲ್ಲಿ ಏರುಪೇರಾದ ಕಾರಣ ಹೆಚ್ಚಿನ ಮೀನುಗಳು ಸ್ಥಳೀಯವಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಮೀನುಗಳು ಮಾರುಕಟ್ಟೆಗೆ ಬರುತ್ತಿವೆ. ಕೋಳಿ-ಮೊಟ್ಟೆ ದುಬಾರಿ!
ಕೋವಿಡ್ ಆರಂಭದ ದಿನದಲ್ಲಿ ಕೋಳಿ ಮಾಂಸದ ಬೆಲೆ ಭಾರೀ ಇಳಿಕೆ ಯಾಗಿತ್ತು. ಅನ್‌ಲಾಕ್ ಆದ ಬಳಿಕ ಗ್ರಾಹಕರ
ಬೇಡಿಕೆಗೆ ತಕ್ಕಂತೆ ಕೋಳಿ, ಮೊಟ್ಟೆ ಪೂರೈಕೆ ಇಲ್ಲದ ಕಾರಣದಿಂದ ಬೆಲೆ ಹಂತ ಹಂತ ವಾಗಿ ಗಗನಕ್ಕೇರುತ್ತಿದೆ.. ಕೋಳಿಯ ಧಾರಣೆ ಒಂದು ಕೆ.ಜಿ. (ಸ್ಕಿನ್ ಸಹಿತ ಮಾಂಸದ ಕೋಳಿಗೆ) 160 ರೂ. ನಿಂದ 180 ರೂ., (ಸ್ಕಿ® ರಹಿತ ಮಾಂಸದ ಕೋಳಿಗೆ) 200ರಿಂದ 240 ರೂ.ಗೆ
ಏರಿಕೆಯಾಗಿದೆ. ಹೋಲ್‌ಸೇಲ್‌ನಲ್ಲಿ ಒಂದು ಮೊಟ್ಟೆಗೆ 6 ರೂ. ಇದ್ದರೆ ಅಂಗಡಿ ಗಳಲ್ಲಿ 6.50 ರೂ.ನಿಂದ 7 ರೂ.ಗೆ ಮಾರಾಟ ಮಾಡಲಾಗುತ್ತಿದೆ.
Related Articles
ಲಾಕ್‌ಡೌನ್ ಅವಧಿಯಲ್ಲಿ ಹಕ್ಕಿ ಜ್ವರ ಹಾಗೂ ಸುಳ್ಳು ಸುದ್ದಿಯಿಂದ ಕೋಳಿಗಳನ್ನು ಸಾಯಿಸಿದ ಪರಿಣಾಮ ಇದೀಗ ಬೇಡಿಕೆಗೆ ತಕ್ಕಷ್ಟು ಉತ್ಪಾದನೆಯಾಗುತ್ತಿಲ್ಲ. ಅನ್‌ಲಾಕ್ ಬಳಿಕ ಕೋಳಿ ಫಾರಂಗಳಿಗೆ ಫೀಡ್ (ಕೋಳಿ ಆಹಾರ) ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿದೆ. ಇದೀಗ ಫೀಡ್ ಪೂರೈಕೆ ಯಥಾಸ್ಥಿತಿಗೆ ಬಂದರೂ, ಕೋಳಿ ಉತ್ಪಾದನೆ ಸಹಜ ಸ್ಥಿತಿಗೆ ಬರಲು ಇನ್ನಷ್ಟು ಸಮಯ ಬೇಕು ಎಂದು ಕೋಳಿ ಫಾರಂ ಮಾಲಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
Advertisement
ವ್ಯಾಪಾರ ಕಡಿಮೆಮೀನಿನ ಬೆಲೆಯಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ವ್ಯಾಪಾರ ತುಂಬಾ ಕಡಿಮೆ ಇದೆ. ನವರಾತ್ರಿ ಸಂದರ್ಭದಲ್ಲಿ ಇನ್ನೂ ಇಳಿಕೆಯಾಗುವ ಸಾಧ್ಯತೆ ಇದೆ.
-ಬೇಬಿ ಸಾಲಿಯಾನ್, ಮಹಿಳಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ, ಉಡುಪಿ ತಾಲೂಕು.