Advertisement

ಮೀನು ನಿಷೇಧ ತೆರವಿಲ್ಲ: ರಾಣೆ

06:00 AM Dec 02, 2018 | Team Udayavani |

ಪಣಜಿ: ಮೀನು ಸಾಗಾಟಗಾರರು ಮತ್ತು ವ್ಯಾಪಾರಿಗಳು ಎಫ್‌ಡಿಎ ಸೂಚನೆ ಪಾಲನೆ ಮಾಡುವವರೆಗೆ ಹೊರ ರಾಜ್ಯಗಳ ಮೀನು ನಿಷೇಧ ತೆರವುಗೊಳಿಸಲಾಗುವುದಿಲ್ಲ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಸ್ಪಷ್ಟಪಡಿಸಿದ್ದಾರೆ. ಗೋವಾ ಸರಕಾರವು ಹೊರಡಿಸಿರುವ ಆದೇಶ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧವಲ್ಲ. ಇಲ್ಲಿನ ಜನತೆಯ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಸಿಎಂ ಕುಮಾರಸ್ವಾಮಿ ಬರೆದ ಪತ್ರ ನಮ್ಮ ಕೈ ಸೇರಿದೆ. ಆದರೆ ಹೊರ ರಾಜ್ಯಗಳ ಮೀನುಗಳಿಗೆ ಹೇರಿರುವ ನಿಷೇಧ ಮುಂದುವರಿಯಲಿದೆ ಎಂದರು. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next