Advertisement

ಅಫ್ಘಾನ್‌ಗೆ ಮೊದಲ ಟೆಸ್ಟ್‌ ಗೆಲುವು

12:30 AM Mar 19, 2019 | Team Udayavani |

ಡೆಹ್ರಾಡೂನ್‌: ಅಫ್ಘಾನಿಸ್ಥಾನ ತನ್ನ ಟೆಸ್ಟ್‌ ಇತಿಹಾಸದ ಮೊದಲ ಜಯ ದಾಖಲಿಸಿದೆ. ಡೆಹ್ರಾಡೂನ್‌ ಟೆಸ್ಟ್‌ ಪಂದ್ಯದಲ್ಲಿ ಐರ್ಲೆಂಡ್‌ಗೆ 7 ವಿಕೆಟ್‌ ಸೋಲುಣಿಸುವ ಮೂಲಕ ಅಫ್ಘಾನ್‌ ಈ ಸಂಭ್ರಮ ಆಚರಿಸಿತು.

Advertisement

147 ರನ್‌ ಗೆಲುವಿನ ಗುರಿ ಪಡೆದಿದ್ದ ಅಫ್ಘಾನಿಸ್ಥಾನ, ಪಂದ್ಯದ 4ನೇ ದಿನವಾದ ಸೋಮವಾರ 3 ವಿಕೆಟ್‌ ನಷ್ಟದಲ್ಲಿ 149 ರನ್‌ ಬಾರಿಸಿತು. ಎರಡೂ ತಂಡಗಳ ಪಾಲಿಗೆ ಇದು ಕೇವಲ 2ನೇ ಟೆಸ್ಟ್‌ ಆಗಿತ್ತು. ಅಫ್ಘಾನ್‌ ಕಳೆದ ವರ್ಷ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಟೆಸ್ಟ್‌ ಪದಾರ್ಪಣೆ ಮಾಡಿತ್ತು.

ಚೇಸಿಂಗ್‌ ವೇಳೆ ರೆಹಮತ್‌ ಶಾ ಮತ್ತು ಎಹಸಾನುಲ್ಲ ಜನತ್‌ 2ನೇ ವಿಕೆಟಿಗೆ 139 ರನ್‌ ಜತೆಯಾಟ ನಡೆಸಿ ಮೆರೆದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಜನತ್‌ ಅಜೇಯ 65 ರನ್‌, ಶಾ 76 ರನ್‌ ಮಾಡಿ ಐರ್ಲೆಂಡ್‌ಗೆ ಅಡ್ಡಿಯಾದರು.

“ಅತ್ಯಂತ ಖುಷಿಯ ಕ್ಷಣ ಇದಾಗಿದೆ. ನಮ್ಮ ತಂಡಕ್ಕೆ, ಅಫ್ಘಾನಿಸ್ಥಾನಕ್ಕೆ ಹಾಗೂ ದೇಶದ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ. ಈ ಪಂದ್ಯದಲ್ಲಿ ನಮ್ಮ ಬೌಲಿಂಗ್‌ ಉತ್ತಮ ಮಟ್ಟದಲ್ಲಿತ್ತು. ನಾವಿನ್ನು ಏಕದಿನ ವಿಶ್ವಕಪ್‌ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದೇವೆ’ ಎಂಬುದಾಗಿ ಅಫ್ಘಾನಿಸ್ಥಾನ ತಂಡದ ನಾಯಕ ಅಸYರ್‌ ಅಫ್ಘಾನ್‌ ಹೇಳಿದರು.

ಅತೀ ಬೇಗನೇ ಗೆಲುವು
ಈ ಸಾಧನೆಯೊಂದಿಗೆ ಅಫ್ಘಾನಿಸ್ಥಾನ ಅತೀ ಬೇಗನೇ ಮೊದಲ ಟೆಸ್ಟ್‌ ಗೆದ್ದ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನದ ಸಾಲಲ್ಲಿ ಕಾಣಿಸಿಕೊಂಡಿತು. ಈ ಮೂರೂ ತಂಡಗಳಿಗೆ ಎರಡನೇ ಟೆಸ್ಟ್‌ನಲ್ಲೇ ಗೆಲುವು ಒಲಿದಿದೆ. ಆಸ್ಟ್ರೇಲಿಯ ಮೊದಲ ಟೆಸ್ಟ್‌ ಪಂದ್ಯದಲ್ಲೇ ಜಯಭೇರಿ ಮೊಳಗಿಸಿತ್ತು. ಅದು ಟೆಸ್ಟ್‌ ಇತಿಹಾಸದ ಪ್ರಥಮ ಪಂದ್ಯವೂ ಆಗಿತ್ತು (1877ರ ಮೆಲ್ಬರ್ನ್ ಟೆಸ್ಟ್‌, ಅಂತರ 45 ರನ್‌).

Advertisement

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌-172 ಮತ್ತು 288. ಅಫ್ಘಾನಿಸ್ಥಾನ-314 ಮತ್ತು 3 ವಿಕೆಟಿಗೆ 149. ಪಂದ್ಯಶ್ರೇಷ್ಠ: ರೆಹಮತ್‌ ಶಾ.

Advertisement

Udayavani is now on Telegram. Click here to join our channel and stay updated with the latest news.

Next