ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ ವಿಕ್ರಮ್ ಮತ್ತು ಪ್ರಜ್ಞಾನ್ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆಗಿದ್ದ ಬೆನ್ನಲ್ಲೇ, ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ಇಳಿಯುತ್ತಿರುವ ದೃಶ್ಯದ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.
ಇದನ್ನೂ ಓದಿ:Udupi; ಬಂಧನಕ್ಕೆ ಹೆದರಿ ಕೀಟನಾಶಕ ಸೇವನೆ; ಪೊಲೀಸ್ ವಾಹನದಲ್ಲೇ ಅಸ್ವಸ್ಥನಾದ ಆರೋಪಿ
ಚಂದ್ರನ ನೆಲದಲ್ಲಿ ಪ್ರಜ್ಞಾನ್ ರೋವರ್ ಇಳಿಯುತ್ತಿರುವ ಸನ್ನಿವೇಶದ ಮೊದಲ ಚಿತ್ರ ಮತ್ತು ವಿಡಿಯೋವನ್ನು ವಿಕ್ರಮ್ ಲ್ಯಾಂಡರ್ ಸೆರೆಹಿಡಿದಿದೆ.
ಚಂದ್ರಯಾನ 3ರ ರೋವರ್ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಗೆ ಹೇಗೆ ಇಳಿಯಿತು ಎಂಬ ಕ್ಯಾಪ್ಶನ್ ನೊಂದಿಗೆ ಇಸ್ರೋ ವಿಡಿಯೋವನ್ನು ಟ್ವೀಟ್ ಮಾಡಿದೆ. ಆಗಸ್ಟ್ 23ರ ಸಂಜೆ 6ಗಂಟೆ 4 ನಿಮಿಷಕ್ಕೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಿತ್ತು.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆದ ಸುಮಾರು 4ಗಂಟೆಯ ನಂತರ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಗೆ ಇಳಿಯುತ್ತಿರುವ ದೃಶ್ಯವನ್ನು ವಿಕ್ರಮ್ ಸೆರೆಹಿಡಿದಿದ್ದು, ಈ ವಿಡಿಯೋವನ್ನು ಇಸ್ರೋ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.