ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ವರ್ಷದ ಮೊದಲ ಮಳೆಯ ಸಿಂಚನವಾಗಿ, ಭೂಮಿಗೆ ತಂಪೆರೆದಿದೆ. ಗುಡುಗು-ಮಿಂಚಿನೊಂದಿಗೆ ರಾತ್ರಿ 7.40ರ ಸುಮಾರಿಗೆ ತುಂತುರು ಹನಿಯೊಂದಿಗೆ ಆರಂಭವಾದ ಮಳೆ 8 ಗಂಟೆ ನಂತರ ಸುಮಾರು ಒಂದು ಗಂಟೆಗಳ ಸಾಧಾರಣವಾಗಿ ಸುರಿಯಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ಬರುವ ಎಚ್.ಡಿ.ಕೋಟೆ ತಾಲೂಕಿನ ಎನ್.ಬೆಳ್ತೂರು ಗ್ರಾಪಂ ವ್ಯಾಪ್ತಿಯಲ್ಲಿ 42.5 ಮಿ.ಮೀ, ಕಂದಲಿಕೆ ವ್ಯಾಪ್ತಿಯಲ್ಲಿ 11.5 ಮಿ.ಮೀ, ಕ್ಯಾತನಹಳ್ಳಿ ವ್ಯಾಪ್ತಿಯಲ್ಲಿ 29 ಮಿ.ಮೀ ಮಳೆಯಾಗಿದೆ. ನಂಜನಗೂಡು ತಾಲೂಕಿನ ಹಾಡ್ಯ ಪಂಚಾಯ್ತಿ ವ್ಯಾಪ್ತಿಯಲ್ಲಿ 16.5 ಮಿ.ಮೀ, ಹುಣಸೂರು ತಾಲೂಕಿನ ಚಲ್ಲಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ 17 ಮಿ.ಮೀ,
ಧರ್ಮಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ 16.5 ಮಿ.ಮೀ, ಉದ್ಭೂರು ಕಾವಲ್ ವ್ಯಾಪ್ತಿಯಲ್ಲಿ 29 ಮಿ.ಮೀ, ತಟ್ಟೆಕೆರೆ ವ್ಯಾಪ್ತಿಯಲ್ಲಿ 24 ಮಿ.ಮೀ ಮಳೆಯಾಗಿದೆ. ಪಿರಿಯಾಪಟ್ಟಣದಲ್ಲಿ 9 ಮಿ.ಮೀ, ತಾಲೂಕಿನ ಆವರ್ತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 28 ಮಿ.ಮೀ ಮಳೆಯಾಗಿದ್ದರೆ. ತಿ.ನರಸೀಪುರ ತಾಲೂಕಿನ ಕೇತುಪುರ,
ರಂಗ ಸಮುದ್ರ ಭಾಗದಲ್ಲಿ 15.5 ಮಿ.ಮೀ, ತುಂಬಲ 12.5 ಮಿ.ಮೀ, ಕುಪ್ಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ 25 ಮಿ.ಮೀ ಮಳೆಯಾಗಿದೆ. ಮೈಸೂರು ನಗರದಲ್ಲಿ 5ಮಿ.ಮೀ ತುಂತುರು ಮಳೆಯಾಗಿದ್ದು, ಮೈಸೂರು ತಾಲೂಕಿನ ಗೋಪಾಲಪುರ 5ಮಿ.ಮೀ, ಸಿಂಧುವಳ್ಳಿ 5 ಮಿ.ಮೀ, ಕಡಕೊಳ 5 ಮಿ.ಮೀ, ಶ್ರೀರಾಂಪುರ ಭಾಗದಲ್ಲಿ 5 ಮಿ.ಮೀ, ಮರಟಿಕ್ಯಾತನಹಳ್ಳಿ ಭಾಗದಲ್ಲಿ 1.5 ಮಿ.ಮೀ ಮಳೆಯಾಗಿದೆ.
ಮೋಡದಲ್ಲಿ ತೇವಾಂಶ ಹೆಚ್ಚಿರುವುದರಿಂದ ಮೇಲ್ಮೆ„ ಸುಳಿಗಾಳಿಯಿಂದಾಗಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ.