Advertisement

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

10:24 PM Dec 20, 2024 | Team Udayavani |

ಬೆಳ್ತಂಗಡಿ: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಬ್ಬಿಣ ಸಾಗಿಸುತ್ತಿದ್ದ (ಗುಜರಿ) ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ಈ ವೇಳೆ ಲಾರಿ ಚಾಲಕ ಚಿಕ್ಕಮಗಳೂರಿನ ರಾಜು ಜಿ. ವಾಹನ ಬಿಟ್ಟು ಪರಾರಿಯಾಗಿದ್ದು ವಾಹನವನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬೆಳ್ತಂಗಡಿ ನಗರದ ಹಳೆಪೇಟೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಲಾರಿಯಲ್ಲಿ ಕಬ್ಬಿಣದ ವಸ್ತುಗಳನ್ನು (ಗುಜರಿ) ಗುರುವಾಯನಕೆರೆಯಿಂದ ಬೆಳ್ತಂಗಡಿ ಕಡೆಗೆ ಸಾಗಿಸುತ್ತಿದ್ದಾಗ ಡಿ. 16ರಂದು ರಾತ್ರಿ ಮಂಗಳೂರು ಪಶ್ಚಿಮ ವಲಯದ ವಾಣಿಜ್ಯ ತೆರಿಗೆ ಸಹಾಯಕ ಅಯುಕ್ತ ಜಾರಿ-1 ಸತೀಶ್‌ ಬಟ್ವಾಡಿ ನೇತೃತ್ವದ ತಂಡ ಕರ್ತವ್ಯದಲ್ಲಿರುವಾಗ ತಡೆದು ನಿಲ್ಲಿಸಿ ಲಾರಿಯನ್ನು ತಪಾಸಣೆ ಮಾಡಿದಾಗ ದಾಖಲೆಗಳನ್ನು ನೀಡದೆ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಈ ವೇಳೆ ಸರಕಾರದ ಯಾವುದೇ ದಾಖಲೆಗಳು ಇಲ್ಲದೆ ಅಕ್ರಮ ಸಾಗಾಟ ಮಾಡಿರುವುದು ಪತ್ತೆಯಾಗಿದೆ.

ಲಾರಿಯನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಿ ವಾಹನದ ಮಾಲಕರಿಗೆ ನೋಟಿಸ್‌ ನೀಡಿದ್ದು, ಈ ಬಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next